ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೆರೆಯಾದ ಚಿರತೆ: ಮರೆಯಾದ ಚಿಂತೆ

Rashmi Kasaragodu
Updated On : 10 Jun 2014, 1:27 am

ಚನ್ನಪಟ್ಟಣ: ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.   ಕಾಡಂಕನಹಳ್ಳಿ, ನುಣ್ಣೂರು, ಗೀಜಗದಾಸನದೊಡ್ಡಿ, ನೇರಳೂರು ಗ್ರಾಮ ಸೇರಿದಂತೆ ಸುತ್ತ-ಮುತ್ತಲ ಗ್ರಾಮಗಳ ಜನತೆಯಲ್ಲಿ ಕಳೆದ ಮೂರು ತಿಂಗಳಿಂದ ಆತಂಕ ಮೂಡಿಸಿದ್ದ ಚಿರತೆ ಭಾನುವಾರ ರಾತ್ರಿ ಕಾಡಂಕನಹಳ್ಳಿ ಗ್ರಾಮದ ಹೊರ-ವಲಯದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿದೆ.
ಗ್ರಾಮದಲ್ಲಿ ರೈತರ ಸಾಕು ಪ್ರಾಣಿಗಳ ಮೇಲೆರಗಿ ಸಾಯಿಸುತ್ತಿದ್ದ ಚಿರತೆ ಹಾವಳಿಯಿಂದ ಭಯ ಭೀತರಾಗಿದ್ದ ಈ ಭಾಗದ ಗ್ರಾಮಸ್ಥರು ಸಂಜೆ ವೇಳೆ ಮನೆಯಿಂದ ಹೊರ ಬರಲು ಅಂಜುವಂತಾಗಿತ್ತು. ಗ್ರಾಮಸ್ಥರ ಮಾಹಿತಿ ಆಧರಿಸಿ ಎರಡು ಕಡೆ ಬೋನು ಇಡಲಾಗಿತ್ತಾದರೂ ಚಿರತೆ ಸಿಕ್ಕಿರಲಿಲ್ಲ. ಜೂ.3 ರಂದು ಕಾಡಂಕನಹಳ್ಳಿ ಗ್ರಾಮದಲ್ಲಿ ರೈತರ ಕುರಿಯನ್ನು ಚಿರತೆ ತಿಂದು ಹಾಕಿದ ಬಳಿಕ ಗ್ರಾಮದ ಹೊರ ವಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆ ಹಿಡಿಯಲು ಪ್ರಯತ್ನ ನಡೆಸಿದ್ದರು. ಕಳೆದ ಭಾನುವಾರ ರಾತ್ರಿ ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದ ಚಿರತೆ ಬೋನಿಗೆ ಬಿದ್ದಿದೆ.



ಪುನುಗು ಬೆಕ್ಕು ರಕ್ಷಣೆ
ತಾಲೂಕಿನ ನುಣ್ಣೂರು ಗ್ರಾಮದಲ್ಲಿ ಬಾವಿಗೆ ಬಿದಿದ್ದ ಒಂದು ವರ್ಷದ ಪುನುಗು ಬೆಕ್ಕನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಗ್ರಾಮದ ಪಾಳು ಬಾವಿಯಲ್ಲಿ ಬಿದ್ದಿದ್ದ ಪುನುಗು ಬೆಕ್ಕನ್ನು ಗ್ರಾಮಸ್ಥರು  ಚಿರತೆ ಮರಿ ಎಂದು ಭಾವಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಗಿರೀಶ್, ಉಪ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಮತ್ತು ಸಿಬ್ಬಂದಿ ಬೆಕ್ಕನ್ನು ರಕ್ಷಿಸಿ ತಾಲೂಕಿನ ಕೆಂಗಲ್ ಸಮೀಪದ ಕೆಂಗಲ್ ಹನುಮಂತಯ್ಯ ಟ್ರೀ ಪಾರ್ಕ್‌ನಲ್ಲಿ ಬಿಟ್ಟಿದ್ದಾರೆ.



ಕಾವೇರಿ ವನ್ಯಧಾಮಕ್ಕೆ ಚಿರತೆ
ಕಾಡಂಕನಹಳ್ಳಿ ಗ್ರಾಮದಲ್ಲಿ ಸೆರೆ ಸಿಕ್ಕ ಸುಮಾರು ನಾಲ್ಕು ವರ್ಷ ಪ್ರಾಯದ್ದಾಗಿದ್ದು ಆರೋಗ್ಯ ಯುತವಾಗಿದೆ. ಚಿರತೆಯನ್ನು  ಮುತತ್ತಿಯ ಕಾವೇರಿ ವನ್ಯ ಜೀವಿ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಕಾಡಂಕನಹಳ್ಳಿ ಮತ್ತು ಸುತ್ತ ಮುತ್ತಲ ಗ್ರಾಮಗಳಿಂದ  ಸಾಕಷ್ಟು ಹಾವಳಿ ಎಬ್ಬಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದ್ದು. ತಾಲೂಕಿನ ಇತರ ಗ್ರಾಮಗಳಲೂ ಚಿರತೆ ಹಾವಳಿಯ ಬಗ್ಗೆ ದೂರು ಬರುತ್ತಿದ್ದು ದೂರು ಬಂದ ಗ್ರಾಮಗಳಲ್ಲಿ ಚಿರತೆ ಹಿಡಿಯಲು ಬೋನು ಇರಿಸುವುದಾಗಿ ತೆಂಗಿನಕಲ್ಲು ಉಪ ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement