ನಿಲ್ಲದ ಬಸ್: ಆಕ್ರೋಶ ಶಾಸಕರ ನೇತೃತ್ವದಲ್ಲಿ ರಸ್ತೆ ತಡೆ, ಪ್ರತಿಭಟನೆ
ನೆಲಮಂಗಲ : ತಾಲೂಕಿನ ದಾಬಸ್ಪೇಟೆಯಲ್ಲಿ ಸರ್ಕಾರಿ ಬಸ್ಗಳ ನಿಲ್ಲಿಸದೇ ಮೇಲು ಸೇತುವೆ ಮೇಲೆಯೇ ಹೋಗುತ್ತಿರುವುದನ್ನು ವಿರೋಧಿಸಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಹಲವಾರು ಮುಖಂಡರು ರಸ್ತೆ ತಡೆ ನಡೆಸಿ ಹೆದ್ದಾರಿ 4ರಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಪ್ರತಿಭಟನೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳು ಸೇರಿದಂತೆ ನೂರಾರು ಮಂದಿ ಕೆ.ಎಸ್.ಆರ್.ಟಿ ತುಮಕೂರು ಡಿಪೋ ಮತ್ತು ಬೆಂಗಳೂರು ಡಿಪೋದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್ಗಳನ್ನು ತಡೆದು ಇಪ್ಪತ್ತು ನಿಮಿಷದ ಕಾಲ ರಸ್ತೆ ತಡೆ ನಡೆಸಿದರು.ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಸರ್ಕಾರಿ ಬಸ್ಗಳು ನಿಲುಗಡೆಗೆ ಮೇಲಾಧಿಕಾರಿಗಳು ಸ್ಪಷ್ಟವಾದ ಆದೇಶವಿದ್ದರೂ ಚಾಲಕರು ಮತ್ತು ನಿರ್ವಾಹಕರು ಬಸ್ ನಿಲ್ಲಿಸದೆ ಮೇಲು ಸೇತುವೆ ಮೇಲೆಯೇ ಹೋಗುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು, ನೌಕರರು ಮತ್ತು ಮಾಸಿಕ ಬಸ್ ಪಾಸ್ ಪಡೆದಿರುವವರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ.ದಾಬಸ್ಪೇಟೆ ಎಂದು ಬರೆಸುವುದು ಜೊತೆಗೆ ಕಡ್ಡಾಯವಾಗಿ ಟಿ.ಸಿ.ಗಳ ಬಳಿ ಸಹಿ ಮತ್ತು ಸೀಲ್ ಪಡೆದು ಹೋಗುವುದು. ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಟಿ.ಸಿಗಳು ಮಾತ್ರ 4 ಬಸ್ಗಳ ನಾಮ ಫಲಕದ ದಾಬಸ್ಪೇಟೆ ಹೆಸರನ್ನು ನಮೂದಿಸಲಾಗಿದೆ ಇಬ್ಬರು ಟಿ.ಸಿಗಳನ್ನು ನೇಮಕ ಮಾಡಲಾಗಿದೆ. ನಿಲುಗಡೆ ಇರುವ ಬಸ್ನ ಚಾಲಕ ಮತ್ತು ನಿರ್ವಾಹಕರು ನಿಲ್ದಾಣಕ್ಕೆ ಹೋಗದೆ ಮೇಲು ಸೇತುವೆ ಮೇಲೆ ಬಂದರೆ ಶಿಸ್ತು ಕ್ರಮ ನಡೆಸುವುದಾಗಿ ತಿಳಿಸಿದರು.
ಬಾಲ ಕಾರ್ಮಿಕ ಪದ್ಧತಿ ವಿರೋಧಿ ಮೆರವಣಿಗೆ ಜಾಥಾ ನಾಳೆ
ರಾಮನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ವಕೀಲರ ಸಂಘ, ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳ ಒಕ್ಕೂಟದಿಂದ ಜೂ.12ರ ಬೆಳಗ್ಗೆ 10ಕ್ಕೆ ಮಿನಿ ವಿಧಾನಸೌಧದಿಂದ ಶಾಲಾ ಮಕ್ಕಳಿಂದ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಥಾ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಜಾಥಾಕ್ಕೆ ಚಾಲನೆ ನೀಡುವರು. ನಂತರ ಮಿನಿ ವಿಧಾನಸೌಧದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಎಂ.ಕೆ.ಪ್ರಹ್ಲಾದ್ ವಹಿಸುವರು. ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಪ್ರತಿಜ್ಞಾ ವಿಧಿ ಬೋಧಿಸುವರು.ಪ್ರಧಾನ ಹಿರಿಯ ನ್ಯಾಯಾಧೀಶ ಎಸ್.ಎಚ್.ಹೊಸಗೌಡರ, ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಎಚ್.ಕುಮಾರ್, ಡಿಡಿಪಿಐ ಪ್ರಹ್ಲಾದಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಅಯೂಬ್ ಷರೀಫ್ ಭಾಗವಹಿಸುವರು. 13 ರಂದು ಉದ್ಯೋಗ ಮೇಳ: ಜಿ.ವಿ.ಕೆ.-ಇ.ಎಂ.ಆರ್.ಐ.ನ 108 ಸಂಸ್ಥೆಗೆ ಸ್ಟಾಫ್ನ್ರ್ಸ್ ಹಾಗೂ ಪೈಲಟ್ (ಡ್ರೈವರ್) ಹುದ್ದೆಗಳಿಗೆ ನಗರದ ಕಂದಾಯ ಭವನದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂ.13 ರಂದು ಉದ್ಯೋಗ ಮೇಳ ನಡೆಯಲಿದೆ.ಹೆಚ್ಚಿನ ಮಾಹಿತಿಗೆ ದೂ.080-23280161, ಮೊ.98869-99108 ಸಂಪರ್ಕಿಸುವುದು.