ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Rashmi Kasaragodu
Updated On : 13 Jun 2014, 2:24 am

ಕನಕಪುರ: ಆರು ವರ್ಷದ ಬಾಲಕಿಯ ಮೇಲೆ ನೆರೆಹೊರೆಯ ಪರಿಚಿತ ಯುವಕನೊಬ್ಬ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ಕನಕಪುರ ತಾಲೂಕು ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಕೃಷ್ಣ (22)ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ.
 ಶಾಲೆ ಮುಗಿಸಿ ಬಂದ ಬಾಲಕಿಯನ್ನು ಮನೆಯಲ್ಲಿ ಯಾರೂ ಇಲ್ಲದಿದ್ದುದನ್ನು ಗಮನಿಸಿ ಚಾಕೊಲೇಟ್  ಕೊಡಿಸುವ ಆಮಿಷಮೊಡ್ಡಿ ತನ್ನ ಮನೆಗೆ ಕರೆತಂದ ಕೃಷ್ಣ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಕೃಷ್ಣನಿಗೆ ಮದುವೆಯಾಗಿದ್ದು ಒಂದು ಮಗುವೂ ಇದೆ. ಮನೆಯ ಬಳಿ ಅಳುತ್ತಿದ್ದ ಬಾಲಕಿಯನ್ನು
ತಾಯಿ ವಿಚಾರಿಸಿದಾಗ ಹೊಟ್ಟೆನೋವು ಎಂದು ಅಳುತ್ತಾ ತಿಳಿಸಿದೆ. ವೈದ್ಯರ ಬಳಿ ಕರೆತಂದಾಗ ಅತ್ಯಾಚಾರದ ಸಂಗತಿ ಹೊರಬಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ತಾಯಿ ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement