ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅನಿಷ್ಠ ಪದ್ಧತಿಗೆ ಮುಕ್ತಿ ನೀಡಲು ಬದ್ಧತೆ ಅಗತ್ಯ

Rashmi Kasaragodu
Updated On : 13 Jun 2014, 2:21 am

ರಾಮನಗರ: ಜೀತ, ಬಾಲ ಕಾರ್ಮಿಕ ಮತ್ತು ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಕರೆ ನೀಡಿದರು.  ನಗರದ ರೇಷ್ಮೆ ಮಾರುಕಟ್ಟೆ ಸಭಾಂಗಣದಲ್ಲಿ ಶಾಂತ ಜೀವ ಜ್ಯೋತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ ಹಾಗೂ ರೇಷ್ಮೆ ನೂಲು ಬಿಚ್ಚಣಿಕೆದಾರರ ಸಂಘದಿಂದ ಗುರುವಾರ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿವಾರಣೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಾಲ್ಯ, ಯವ್ವನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ ಹೀಗೆ ನಾಲ್ಕು ಹಂತಗಳು ಬಂದು ಹೋಗುತ್ತವೆ. ಈ ಪೈಕಿ ಬಾಲ್ಯ ಅತಿ ಸುಂದರವಾದ ಸಂತೋಷದಾಯಕ ಹಾಗೂ ಆನಂದದಾಯಕ ವ್ಯವಸ್ಥೆಯಾಗಿರುತ್ತದೆ. ಅಂತಹ ಬಾಲ್ಯವನ್ನು ಬಲಿ ತೆಗೆದುಕೊಳ್ಳುವುದು ನ್ಯಾಯೋಚಿತವಲ್ಲ ಎಂದರು. ಬಾಲ್ಯದಲ್ಲಿ ಮಗುವಿನ ನಗು, ಆಲೋಚನೆ, ಆಟಗಳನ್ನು ನೋಡುವುದೇ ಚೆನ್ನ. ಅವರಲ್ಲಿ ಸಾಮಾಜಿಕ, ಭೌತಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಮೂಡಿಸಿ, ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆ ನಮ್ಮದು. ಈ ಬದಲು ಶೋಷಣೆ ಮಾಡುವುದು ಕಾನೂನು ರೀತ್ಯ ಅಪರಾಧ ಎಂದು ಎಚ್ಚರಿಸಿದರು.
ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ದಿವಾಕರ್ ಶೆಟ್ಟಿ ಅವರು ಮಕ್ಕಳ ಹಕ್ಕುಗಳು, ಬಾಲ ಕಾರ್ಮಿಕ ಪದ್ಧತಿ ದುಷ್ಪರಿಣಾಮ ಮತ್ತು ಕಾಯ್ದೆ ಕುರಿತು, ರಾಮನಗರ ತಾಲೂಕು ಮಕ್ಕಳ ರಕ್ಷಣಾಧಿಕಾರಿ ತಾಜುದ್ದೀನ್ ಖಾನ್ ಅವರು ಐಸಿಪಿಎಸ್ ಮತ್ತು ಬಾಲ್ಯ ವಿವಾಹ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ರಾಜೇಶ್ ನಿರೂಪಿಸಿದರು. ಇದೇ ವೇಳೆ  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ, ಮಂಗಾಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement