ಅಶ್ಲೀಲ ಪೋಸ್ಟರ್ಗೆ ಕಡಿವಾಣ ಹಾಕಿ'
ದೊಡ್ಡಬಳ್ಳಾಪುರ: ನಗರದಲ್ಲಿ ಇತ್ತೀಚೆಗೆ ಎಲ್ಲೆಂದರಲ್ಲಿ ಅಶ್ಲೀಲ ಚಲನಚಿತ್ರಗಳ ಪೋಸ್ಟರ್ಗಳನ್ನು ಅಂಟಿಸುತ್ತಿರುವುದು ಹೆಣ್ಣು ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ತೀವ್ರ ಮುಜುಗರ ಅನುಭವಿಸುವಂತಾಗಿದೆ. ಈ ಕೂಡಲೇ ನಗರಸಭೆ ಈ ಬಗೆಯ ಅಶ್ಲೀಲ ಪೋಸ್ಟರ್ಗಳನ್ನು ತೆರವು ಮಾಡಬೇಕು. ಅಂಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಮೀಳಾ ಮಹದೇವ್ ನಗರಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕ ಸ್ಥಳಗಳು, ನೀರಿನ ಟ್ಯಾಂಕ್ಗಳು, ಶಾಲಾ ಕಾಲೇಜುಗಳ ಸುತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣಗಳ ಬಳಿಯಲ್ಲಿ ಕಾಮಪ್ರಚೋದಕ ಮತ್ತು ಸಮಾಜಘಾತುಕ ಸಂದೇಶ ಹೊಂದಿರುವ ಚಲನಚಿತ್ರಗಳ ಪೋಸ್ಟರ್ ಅಂಟಿಸುವುದು ನಿಲ್ಲಬೇಕು. ಪರವಾನಗಿ ನೀಡುವಾಗ ಕಟ್ಟುನಿಟ್ಟಿನ ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದ್ದಾರೆ.
14ಕ್ಕೆ ರೇಲ್ವೆ ಸಚಿವ ಸದಾನಂದಗೌಡ ಭೇಟಿ:: ರಾಜ್ಯ ವಿಧಾನಪರಿಷತ್ತಿಗೆ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಎಂ.ನೀಲಯ್ಯ ಪರ ಪ್ರಚಾರಕ್ಕಾಗಿ ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಜೂ.14ರಂದು ಪಟ್ಟಣಕ್ಕೆ ಆಗಮಿಸಿ, ಮತಯಾಚಿಸಲಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿ ಮತಯಾಚನೆ ಮಾಡಲಿದ್ದಾರೆ.