ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಒಳಚರಂಡಿ ಕಾಮಗಾರಿ ಕೂಡಲೇ ಚುರುಕುಗೊಳಿಸಿ: ಶಾಸಕ

Rashmi Kasaragodu
Updated On : 13 Jun 2014, 2:25 am

ಮಾಗಡಿ : ಪಟ್ಟಣದಲ್ಲಿ ಆಮೆಗತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಕೂಡಲೆ ಚುರುಕುಗೊಳಿಸುವಂತೆ ಶಾಸಕ ಎಚ್.ಸಿ. ಬಾಲಕೃಷ್ಣ ಒಳಚರಂಡಿ  ಮಂಡಲಿ ಎಂಜಿನಿಯರ್‌ಗೆ ತಾಕೀತು ಮಾಡಿದರು. ಅವರು ಮಾಗಡಿ ಪುರಸಭೆ ಕಚೇರಿಯಲ್ಲಿ ಒಳಚರಂಡಿ ಮಂಡಲಿ ಎಂಜಿನಿಯರ್ ಸಭೆ ಕರೆದು ಮಾತನಾಡಿ ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಹತ್ತು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ, ಹೀಗಾದರೆ ನಾಗರಿಕರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು. ಬಾಕಿ ಉಳಿದಿರುವ ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸಬೇಕು. ವಿಸ್ತರಣೆ ಕಾಮಗಾರಿಯನ್ನು ಕೂಡಲೆ ಕೈಗೆತ್ತಿಕೊಳ್ಳುವ ಮೂಲಕ ಅವುಗಳನ್ನು ಆದಷ್ಟು ಬೇಗ ಪೂರ್ಣ ಗೊಳಿಸುವಂತೆ ಎಂಜಿನಿಯರ್‌ಗೆ ತಿಳುವಳಿಕೆ ನೀಡಿದರು.ಮಾಗಡಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯಿಂದ ದುರ್ವಾಸನೆ ಬೀರುತ್ತಿದೆ. ಚರಂಡಿಗಳು ಗಬ್ಬುನಾರುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿದೆ. ಪುರಸಭೆ ಅಧಿಕಾರಿಗಳು ಎಚ್ಚತ್ತು ಕಸ ವಿಲೇವಾರಿಗೆ ಅಗತ್ಯ ಕ್ರಮ ವಹಿಸಬೇಕು. ತರಕಾರಿ ಮಾರುಕಟ್ಟೆಗೆ ಸೂಕ್ತ  ಮಾರುಕಟ್ಟೆ ಕೇಂದ್ರಗಳಿಲ್ಲದೆ ಬಸ್ ಸಂಚರಿಸುವ ರಸ್ತೆಯೇ ಮಾರುಕಟ್ಟೆಯಾಗಿದೆ. ಇದರಿಂದ ಅಪಘಾತವಾಗುವ ಸಂಭವವೇ ಹೆಚ್ಚಾಗಿದ್ದು, ಪುರಸಭೆ ಕೂಡಲೆ ಸಭೆ ಕರೆದು, ಸೂಕ್ತ ಮಾರುಕಟ್ಟೆಗೆ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.ಪುರಸಭಾಧ್ಯಕ್ಷೆ ಫಹೀಂ ಉನ್ನಿಸಾ  ನಯಾಜ್,  ಪುರಸಭೆ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement