ಗೋ. ದೇವೇಗೌಡರಿಗೆ ನಮನ
ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ಕನ್ನಡದ ಹಿರಿಯ ಹೋರಾಟಗಾರ, ಗೋಕಾಕ್ ಚಳವಳಿಯ ನೇತಾರ ಗೋವಿಂದಹಳ್ಳಿ ದೇವೇಗೌಡರಿಗೆ ಇಲ್ಲಿನ ಕನ್ನಡ ಜಾಗೃತ ಪರಿಷತ್ತು ನುಡಿನಮನ ಸಲ್ಲಿಸಿದೆ. ಕನ್ನಡದ ಸಾಕ್ಷಿಪ್ರಜ್ಞೆಯಂತೆ ಬೆಳೆದು, ಡಾ.ರಾಜ್‌ಕುಮಾರ್ ಅವರ ಆಪ್ತರಾಗಿ ಚಳವಳಿಯನ್ನು ಸಂಘಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡ ಧ್ವನಿಸುರುಳಿಗಳನ್ನು ಹೊರತಂದು ಕನ್ನಡಿಗರನ್ನು ಬಡಿದೆಚ್ಚರಿಸುವ ಕೆಲಸ ಮಾಡಿದ ಅವರು ಮೈಸೂರ್ ಬ್ಯಾಂಕ್ ವೃತ್ತದ ಬಳಿ ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಸಂಸ್ಥೆ (ಕನ್ನಡ ಕುಟೀರ) ಸ್ಥಾಪಿಸಿ ನೂರಾರು ಕಾರ್ಯಕ್ರಮಗಳನ್ನು ನಡೆಸಿ ಕನ್ನಡ ಸೇವೆ ಮಾಡಿದ್ದಾರೆ. ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಪರಿಷತ್ತಿನ ಜೊತೆ ನಿಕಟ ಸಂಪರ್ಕ ಹೊಂದಿ ಅನೇಕ ಚಳವಳಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ಸ್ಮರಿಸಿರುವ ಕನ್ನಡ ಜಾಗೃತ ಪರಿಷತ್ತು, ದೇವೇಗೌಡರ ನಿಧನಕ್ಕೆ ಭಾವಪೂರ್ಣ ನುಡಿನಮನ ಸಲ್ಲಿಸಿದೆ ಎಂದು ಅಧ್ಯಕ್ಷ ಡಿ.ವಿ.ಅಶ್ವತ್ಥಪ್ಪ, ಕಾರ್ಯದರ್ಶಿ ತ.ನ.ಪ್ರಭುದೇವ್ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.
ಕನಕಪುರ ಪುರಸಭೆಗೆ ನಾಮಕರಣ: ಕನಕಪುರ ಪುರಸಭೆಗೆ ನೂತನವಾಗಿ ಐದು ಮಂದಿ ಸದಸ್ಯರನ್ನು ನಾಮಕರಣ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ಧಿಕ್ ಪಾಷ ಆದೇಶ ಹೊರಡಿಸಿದ್ದಾರೆ. ಪುರಸಭೆಯ ನಾಮಕರಣ ಸದಸ್ಯರಾಗಿ ಕೆ.ಎನ್.ಶಿವಕುಮಾರ್ (ಅರ್ಕಾವತಿ), ನಂಜುಂಡ ಬಿನ್ ಚಟ್ಟಿಯಪ್ಪ,ಉದ್ಯಮಿ ಕೆ.ಪಿ. ಕೈಲಾಸಶಂಕರ್, ನಾಗರಾಜು.