ನೀಲಯ್ಯ ಪರ ತೇಜಸ್ವಿನಿ ಮತಯಾಚನೆ
ನೆಲಮಂಗಲ: ಶಿಕ್ಷಕರ ಕ್ಷೇತ್ರದಲ್ಲಿನ ಸಮಸ್ಯೆ ಪರಿಹರಿಸಲು ಕ್ರಮ ಅಗತ್ಯವಿದೆ, ಉತ್ತಮ ನಾಯಕರೂ ಬೇಕು ಎಂದು ಮಾಜಿ ಸಂಸದೆ ತೇಜಸ್ವಿನಿ ಗೌಡ ಹೇಳಿದರು.ಅವರು ಗುರುವಾರ ತಾಲೂಕು ಬಿಜೆಪಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ. ನೀಲಯ್ಯರವರಿಗೆ ಮತನೀಡಿ ಆಶೀರ್ವದಿಸಬೇಕು ಎಂದರು.ಶಿಕ್ಷಕರನ್ನು ಗುಣಮಟ್ಟ ಶಿಕ್ಷಣ ನೀಡಲು ಬೋಧನೆಗೆ ಮೀಸಲಿಡಬೇಕು. ಶಿಕ್ಷಕರ ವರ್ಗಾವಣೆ ಪಾರದರ್ಶಕ ಜಾರಿಗೆ ತರಬೇಕು. ಶಿಕ್ಷಕರು ಯಾವುದೇ ಆಮಿಷಗೊಳಗಾಗದೇ ಉತ್ತಮ ಅಭ್ಯರ್ಥಿಗೆ ಆಯ್ಕೆಗೊಳಿಸುವಂತೆ ಮನವಿ ಮಾಡಿದರು.ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಎಂ.ಗೌಡ, ಹನುಮಂತಕುಮಾರ್, ನಾಗರಾಜು, ಬೈರೇಗೌಡ್ರು, ಸತೀಶ್, ಪ್ರಕಾಶ್, ಶಿವಾಜಿರಾವ್, ರಾಮಸ್ವಾಮಿ, ಸೌಮ್ಯ, ರಾಜಮ್ಮ, ತೇಜೋಲಕ್ಷ್ಮಮ್ಮ, ಉಮಾದೇವಿ, ಸೌಭಾಗ್ಯಮ್ಮ ಇದ್ದರು.