ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾಂಧವ್ಯ ಶಿಕ್ಷಣ ಸಂಸ್ಥೆ ಸಂಭ್ರಮ

Rashmi Kasaragodu
Updated On : 15 Jun 2014, 1:29 am

ಕನಕಪುರ: ಕನಕಪುರ ತಾಲೂಕು ಕಬ್ಬಾಳು ಗ್ರಾಮದಲ್ಲಿ ಬಾಂಧವ್ಯ ಸಾಮಾಜಿಕ ಸಾಂಸ್ಕೃತಿಕ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಉದ್ಯಮಿ ಕುರುಬಳ್ಳಿ ಶಂಕರ್ ನೆರವೇರಿಸಿದರು. ಸಂಸ್ಥೆ ಅಧ್ಯಕ್ಷ ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವೀರಗಾಸೆ ಜಾನಪದ ಪ್ರದರ್ಶನ, ಹೊಳಸಾಲಯ್ಯ ಸಂಗಡಿಗರಿಂದ ಜಾನಪದ ಗೀತಗಾಯನ ನಡೆಯಿತು.ಯುವ ಮುಖಂಡ ಚಂದ್ರ ಮಾತನಾಡಿ, ನಗರೀಕರಣ, ಜಾಗತೀಕರಣಗಳಿಂದಾಗಿ ಜಾನಪದ ಸಂಸ್ಕೃತಿ ಪರಂಪರೆಗಳು ಮೂಲೆಗುಂಪಾಗುತ್ತಿವೆ ಎಂದು ವಿಷಾದಿಸಿದರು. ರಾಜಶೇಖರ, ಮುಖ್ಯಶಿಕ್ಷಕ ಸಿದ್ದಪ್ಪ, ಪುಟ್ಟಸ್ವಾಮಿ, ಗಾಯಕ ಚಂದ್ರಾಜ, ಗೋವಿಂದರಾಜು, ಚಾಮರಾಜು ಪಾಲ್ಗೊಂಡಿದ್ದರು.


ವಿವಿಧ ಕೋರ್ಸ್‌ಗೆ ಅರ್ಜಿ

ರಾಮನಗರ: ಪ್ರಸಕ್ತ ಸಾಲಿನ ಡಿ.ಇಡಿ, ಡಿ.ಪಿಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಡಿ.ಇಡಿ ಕೋರ್ಸಿಗೆ ದ್ವಿತೀಯ ಪಿಯುಸಿ, 12ನೇ ತರಗತಿಯ ಪರೀಕ್ಷೆಯಲ್ಲಿ ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇ. 45  ಮತ್ತು ಇತರೆ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು.ಡಿ.ಪಿ.ಇಡಿ ಕೋರ್ಸಿಗೆ ಸೇರಬಯಸುವ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ ಅಥವಾ ಪರೀಕ್ಷೆಯಲ್ಲಿ ಕನಿಷ್ಠ ಶೇ.45ರಷ್ಟು ಅಂಕಗಳನ್ನು ಹಾಗೂ ಶಿಕ್ಷಣ ಇಲಾಖೆ ಅಥವಾ ವಿಶ್ವವಿದ್ಯಾನಿಲಯ ಅಥವಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯೋಜಿಸಿರುವ ರಾಜ್ಯ ಅಥವಾ ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ ಶೇ.40ರಷ್ಟು ಅಂಕಗಳನ್ನು ಪಡೆದಿರಬೇಕು.ಆನ್‌ಲೈನ್ ಮೂಲಕ ಅರ್ಜಿಯನ್ನು ಜೂ.16 ರಿಂದ 30ರವರೆಗೆ ಸಲ್ಲಿಸಬಹುದು. ಮಾಹಿತಿಗೆ ದೂ.080-22483140, 080-22483145 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement