ಎಂ.ನೀಲಯ್ಯ ಪರ ತೇಜಸ್ವಿನಿ ಪ್ರಚಾರ
ನೆಲಮಂಗಲ: ಸಮಾಜದಲ್ಲಿ ಶಿಕ್ಷಣ ಅಗತ್ಯವಿದೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ನೀಲಯ್ಯ ಪರ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿ ಕಳೆದ ಸುಮಾರು ವರ್ಷಗಳಿಂದ ಶಿಕ್ಷಕರ ಹಲವಾರು ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ. ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಚಿಂತನೆ ನಡೆಸಿ ಅವರ ಪರ ಹೋರಾಟ ಮಾಡುವ ಕಾರ್ಯವಾಗಬೇಕಿದೆ ಎಂದರು. ಶಿಕ್ಷಕರ ಕ್ಷೇತ್ರದ ಚುನಾವಣೆ ಕೂಡ ಬೇರೆ ಸಾರ್ವಜನಿಕ ಚುನಾವಣೆಯಂತೆಯೇ ಎಲ್ಲಾ ಆಮಿಷಗಳೊಡ್ಡಿ ಮತದಾರರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ಸುಶಿಕ್ಷಿತ ಶಿಕ್ಷಕರಾದ ತಾವು ಯಾವುದೇ ಆಸೆಗೊಳಗಾಗದೆ ಉತ್ತಮ ಶಿಕ್ಷಕ ಪ್ರತಿನಿಧಿ ಆಯ್ಕೆಗೊಳಿಸಬೇಕಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಜಗದೀ ಶ್‌ಪ್ರಸಾದ್, ಮುಖಂಡರಾದ ನಾಗೇಶ್, ಸೌಮ್ಯ, ಸೌಭಾಗ್ಯಮ್ಮ ಸೇರಿದಂತೆ ಹಲವಾರು ಶಿಕ್ಷಕರು ಇದ್ದರು.