ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗೃಹಿಣಿ ಹತ್ಯೆ ಆರೋಪಿ ಬಂಧನ

Mainashree
Updated On : 17 Jun 2014, 11:23 am

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಗೃಹಿಣಿ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರನ್ನು ಬಂಧಿಸಿದ್ದಾರೆ.
3 ದಿನಗಳ ಕಾಲ ಕಾಣೆಯಾಗಿದ್ದ ಮಹಿಳೆ ಹೇಮಾವತಿ (30) ನಂತರ ಶವವಾಗಿ ಪತ್ತೆಯಾಗಿದ್ದಳು. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮಹಿಳೆಯ ಪೋಷಕರು ಕೊಟ್ಟ ದೂರಿನನ್ವಯ ಆಕೆಯ ಗಂಡ
ಚಂದ್ರಶೇಖರ್, ಅತ್ತೆ ಗಂಗಲಕ್ಷ್ಮಮ್ಮ, ಮಾವ ರಂಗಸ್ವಾಮಿ ಮತ್ತು ಮೈದುನ ಕಾಂತರಾಜ್‌ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದ ಪೊಲೀಸರು, ಮಹತ್ವದ ದಾಖಲೆ ದೊರೆಯದೆ ನಿರಾಶರಾಗಿದ್ದರು. ಆದರೆ ಗ್ರಾಮಸ್ಥರು ನೀಡಿದ ಸುಳಿವು ಆಧರಿಸಿ ಹತ್ಯೆ ಪ್ರಕರಣ ಭೇದಿಸಿದ್ದು ವಡ್ಡರಪಾಳ್ಯದ ಚಂದ್ರಶೇಖರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದರು. ಆಗ ಸತ್ಯ ಬಯಲಾಗಿದ್ದು, ಚಿನ್ನಾಭರಣದ ದೋಚುವ ಉದ್ದೇಶದಿಂದ ಹೇಮಾವತಿಯನ್ನು ರಾತ್ರಿ 7.30ರ ವೇಳೆ ಸಮೀಪದ ಜವರಯ್ಯನವರ ದ್ರಾಕ್ಷಿ ತೋಟದ ಮನೆಯಲ್ಲಿ ಹತ್ಯೆ ಮಾಡಿದ್ದಾಗಿ ಹೇಳಿದ್ದಾನೆ. ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಸಿಪಿಐ ಶಿವಾರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement