ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಜಯರಾಮು ನಿಧನ ನೋವು ತಂದಿದೆ'

Mainashree
Updated On : 17 Jun 2014, 11:32 am

ಚನ್ನಪಟ್ಟಣ: ಇಲಾಖೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ಸ್ನೇಹಜೀವಿ ಎಂದು ಹೆಸರು ಪಡೆದಿದ್ದ ಪ್ರಯೋಗಾಲಯ ಶಾಸ್ತ್ರಜ್ಞ ಎಸ್.ಆರ್.ಜಯರಾಮು ಅಕಾಲಿಕ ಮರಣ ಇಲಾಖೆಗೆ ಬರಿಸಲಾಗದ ನೋವು ತಂದಿದೆ ಎಂದು ಪ್ರಯೋಗಾಲಯ ಶಾಸ್ತ್ರಜ್ಞರ ಸಂಘದ ಜಿಲ್ಲಾಧ್ಯಕ್ಷ ಹನುಮಚಂದ್ರು ಅಭಿಪ್ರಾಯಪಟ್ಟರು.
ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ನಾಗವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ಶಾಸ್ತ್ರಜ್ಞ ಎಸ್.ಆರ್. ಜಯರಾಮು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಕೆಲಸ ಮಾಡುವ ಸ್ಥಳದಲ್ಲಿ, ಇಲಾಖೆಯಲ್ಲಿ ಎಲ್ಲರೊಂದಿಗೆ ವಿಶ್ವಾಸದಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದ ಜಯರಾಮು ಅಗಲಿಕೆ ಆಘಾತಕಾರಿಯಾಗಿದ್ದು, ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗೌರವಾಧ್ಯಕ್ಷ ಡಿ.ಪುಟ್ಟಸ್ವಾಮಿಗೌಡ, ತಾಲೂಕಿನ ಸುಳ್ಳೇರಿ ಗ್ರಾಮದವರಾದ ಜಯರಾಮು ಸಂಘಟನಾ ಚತುರ, ಸಹೃದಯವಂತ, ಕ್ರಿಯಾಶೀಲ ವ್ಯಕ್ತಿಯಾಗಿದ್ದರು, ಇಲಾಖೆಯ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಇಂತಹ ಸಹೋದ್ಯೋಗಿಯ ಸಾವು ನಮಗೆಲ್ಲ ದಿಗ್ಭ್ರಮೆ ಮೂಡಿಸಿದೆ ಎಂದರು. ಸಭೆಯಲ್ಲಿ ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಪಿ.ಜಯರಾಮು, ಕೆಂಪೆಗೌಡ, ಶಿವಕುಮಾರ್, ನಾರಾಯಣಗೌಡ, ನಾಗರಾಜು, ರಮೇಶ್, ಶಶಿಕಲಾ, ಅಶ್ವಿನಿ, ಸೌಭಾಗ್ಯ, ಸರಸ್ಪತಿ, ಚಂದ್ರು ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement