ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತನ್ನಿ'

Mainashree
Updated On : 17 Jun 2014, 11:32 am

ಮಾಗಡಿ: ಸ್ವಾತಂತ್ರ್ಯ ಬಂದು 66 ವರ್ಷ ಗತಿಸಿದರೂ ಸರ್ಕಾರ ರೈತರಿಗೆ ಶಾಶ್ವತವಾದ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪಟ್ಟನಾಯಕನಹಳ್ಳಿ ಮಠಾಧೀಶ ನಂಜಾವಧೂತ ಮಹಾಸ್ವಾಮೀಜಿ ಸರ್ಕಾರದ ಕಾರ್ಯವೈಖರಿ ಕುರಿತು ತರಾಟೆಗೆ ತೆಗೆದುಕೊಂಡರು.
ಅವರು ಮಾಗಡಿ ತಾಲೂಕಿನ ಮದಲರಯನಪಾಳ್ಯದಲ್ಲಿ ಗ್ರಾಮ ದೇವತೆ ನೂತನ ಮಹಾದ್ವಾರ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ ಎಂದರೆ, ಒಮ್ಮೆ ಎತ್ತಿನ ಹೊಳೆ, ಮತ್ತೊಮ್ಮೆ ಕಾವೇರಿ ನೀರಾವರಿ ಹೀಗೆ ನಮ್ಮನ್ನಾಳುವವ ರಾಜಕಾರಣಿಗಳು ದ್ವಂದ ಹೇಳಿಕೆ ನೀಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವತ್ತ ಚಿಂತಿಸಬೇಕು ಎಂದು  ಸಲಹೆ ನೀಡಿದರು.
ನಮ್ಮ ನಾಡಿನಲ್ಲಿ ಹರಿಯುತ್ತಿರುವ ಕಾವೇರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಇದಕ್ಕೆಲ್ಲ ಮುಂದಾಲೋಚನೆ ಇರುವ ತಜ್ಞರ ಅವಶ್ಯಕತೆ ಇದೆ ಎಂದರು.  
ರೈತರು ಉತ್ಪಾದಿಸುವ ಹಾಲಿಗೆ ಕನಿಷ್ಠ 35 ರು. ದರ ನಿಗದಿಪಡಿಸಬೇಕು. ದೇಶದ ಜೀವನಾಡಿ ಗ್ರಾಮೀಣ ರೈತರು, ರಾಷ್ಟ್ರದ ಸಮೃದ್ಧಿಗೆ ಅನ್ನದಾತ ರೈತರಿಂದ ಸಾಧ್ಯವಿದೆ ಎಂದು ಶ್ರೀಗಳು ತಿಳಿಸಿದರು.
ಶಾಸಕ ಎಚ್.ಸಿ. ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯ ಎನ್ನುವುದು ಶ್ರದ್ಧೆ ಮತ್ತು ಭಕ್ತಿಯ ಪ್ರತೀಕವಾಗಿದೆ ಎಂದರು. ಇದೇ ವೇಳೆ ನಂಜಾವಧೂತ ಮಹಾಸ್ವಾಮೀಜಿ ಮತ್ತು ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಗ್ರಾಮದ ಮಹಿಳೆಯರು ದೇವಾಲಯಕ್ಕೆ ಸ್ವಾಗಸಿದರು. ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಿ.ಪಂ. ಹಂಗಾಮಿ ಅಧ್ಯಕ್ಷ ಎಂ.ಕೆ.ಧನಂಜಯ, ಸದಸ್ಯ ವಿಜಯಕುಮಾರ್, ಮುದ್ದುರಾಜ ಯಾದವ್, ಮಾಜಿ ಸದಸ್ಯ ವೀರಪ್ಪ, ತಾ.ಪಂ. ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ, ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ಎಸ್. ಕಾಂತರಾಜು,ಎಂ.ಎಚ್. ರಂಗನಾಥ್,ರವೀಶ್, ಜುಟ್ಟನಹಳ್ಳಿ ಜಯರಾಂ, ಜಯಕುಮಾರ್, ಎಂ.ಸಿ. ಗೋವಿಂದರಾಜು, ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್, ಮಹಮದ್ ಮುಕ್ತಿಹಾರ್, ಗುತ್ತಿಗೆದಾರ ಲಕ್ಷ್ಮೀಕಾಂತ್, ಕೃಷ್ಣ ನಾಗರಾಜು ಶಾಸಕ
ಎಚ್.ಸಿ. ಬಾಲಕೃಷ್ಣ ಆಪ್ತ ಕಾರ್ಯದರ್ಶಿ ಶ್ರೀನಿವಾಸ್  ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement