ಜನರಿಗೆ ಯೋಜನೆ ನೇರವಾಗಿ ತಲುಪಲಿ
ನೆಲಮಂಗಲ: ಸರ್ಕಾರದ ಸವಲತ್ತು ಹಾಗೂ ಯೋಜನೆಗಳು ಜನತೆಗೆ ಗ್ರಾಮಗಳಲ್ಲಿ ನೇರವಾಗಿ ತಲುಪಿ ಸದುಪಯೋಗವಾಗ ಬೇಕು ಎಂದು ಸಂಸದ ಡಾ. ಎಂ.ವೀರಪ್ಪಮೊಯ್ಲಿ ಹೇಳಿದರು.ತಾಲ್ಲೂಕಿನ ಅರಿಶಿನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಜನಸಂಪರ್ಕ ಸಭೆ ಹಾಗೂ ಗೆಜ್ಜಗದಹಳ್ಳಿಯಲ್ಲಿ 30 ಲಕ್ಷ ರು.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತ ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.ಅರಿಶಿನಕುಂಟೆ ಗ್ರಾಮಕ್ಕೆ ಕುಡಿಯುವ ನೀರಿನ ಅಭಾವ ನೀಗಿಸಲು ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗುವುದೆಂದು ತಿಳಿಸಿದರು.ನೂತನವಾಗಿ ಚಿಕ್ಕಬಳ್ಳಾಪುರಕ್ಕೆ ಎರಡನೇ ಅವಧಿಗೆ ಆಯ್ಕೆಯಾಗಿರುವ ಸಂಸದ ಡಾ. ಎಂ.ವೀರಪ್ಪಮೊಯಿ ಅವರನ್ನು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ನಾರಾಯಣಸ್ವಾಮಿ ಸನ್ಮಾನಿಸಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎನ್.ಎಂ.ರಾಂ, ತಾ.ಪಂ.ಅಧ್ಯಕ್ಷೆ ಸಿ.ವಿ. ಸರಸ್ವತಿ, ಮಾಜಿ ಸಚಿವ ಅಂಜನಮೂರ್ತಿ, ಮುಖಂಡರಾದ ಸಿ.ಆರ್.ಗೌಡ, ನವಾಬ್, ಉಮಾಶಂಕರ್, ಸದಸ್ಯರಾದ ಮೂರ್ತಿ ರಾಜಣ್ಣ, ಪಿ.ಡಿ.ಒ ಪದ್ಮನಾಭ್ ಇದ್ದರು.