ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಣದಿಂದ ಆದರ್ಶ ಸಮಾಜ

Vishwanath S
Updated On : 21 Jun 2014, 12:13 pm

ನೆಲಮಂಗಲ:  ಆದರ್ಶ ಶಿಕ್ಷಣದಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಎಂ.ಇ.ಎಸ್ ಬಿಲ್ಡರ್ಸ್ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.
ಅವರು ತಾಲೂಕಿನ ಎಲೆಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಎಂ.ಇ.ಎಸ್ ಬಿಲ್ಡರ್ಸ್ ಸಂಸ್ಥೆಯವರು ಸುಮಾರು 25 ಕ್ಕ ಹೆಚ್ಚಿನ ಸರ್ಕಾರಿ ಹಿರಿಯ ಮತ್ತು ಕಿರಿಯ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಸಂಸ್ಥೆ ವತಿಯಿಂದ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
 ಎಲೆಕ್ಯಾತನಹಳ್ಳಿ ಶಾಲೆಯು ಶತಮಾನಕ್ಕೂ ಹೆಚ್ಚಿನ ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತಾ ಬಂದಿದ್ದು, ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದೆ. ಇಲ್ಲಿ ಕಲಿತ ಮಕ್ಕಳು ಇಂದು ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದಾರೆ. ಇನ್ನು ಕೆಲವರು ಹುದ್ದೆಯಿಂದ ನಿವೃತ್ತರಾಗಿದ್ದಾರೆ.  ಮತ್ತು  ಕೈಗಾರಿಕೋದ್ಯಮಿಗಳು ಸಮಾಜ ಸೇವಕರು ಇದೇ  ಶಾಲೆಯಲ್ಲಿ ಕಲಿತು ಇಂದು ಹಳೇ ವಿದ್ಯಾರ್ಥಿಗಳಾಗಿ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವುದು ಸಂತೋಷದಾಯಕ ಎಂದರು.
ಸಂಘದ ಕಾರ್ಯದರ್ಶಿ ರಮೇಶ್ ಮಾತನಾಡಿ, ಈ ಶಾಲೆಯು ಕಳೆದ ವರ್ಷವಷ್ಟೆ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಶಾಲೆಯ ಶಿಕ್ಷಕ ಸಮೂಹ  ಮತ್ತು ಶಾಲೆಯ ಹಳೇ ವಿದ್ಯಾರ್ಥಿಗಳು ಬಹಳಷ್ಟು ಶ್ರಮ ವಹಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣೀಕರ್ತರಾಗಿದ್ದಾರೆ. ಮುಂದಿನ ಮಕ್ಕಳಿಗೂ ಪ್ರೇರಣೆಯಾಗಿ ತಾವು ಮುಂದೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಕ್ಕಳಿಗೆ ತಿಳಿಸಿದರು.
 ಸಂಘದ ಹಿರಿಯರಾದ ಹುಲಿಯಪ್ಪ ಪ್ರತಿ ವರ್ಷವು ಎಲೆಕ್ಯಾತನಹಳ್ಳಿಯ ಸುತ್ತಮುತ್ತಲ ಇಪ್ಪತ್ತೈದಕ್ಕು ಹೆಚ್ಚಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಸಮವಸ್ತ್ರ ಮತ್ತು ಶಿಕ್ಷಣಕ್ಕೆ ಬೇಕಾದ ಪರಿಕರಗಳನ್ನು ನೀಡುತ್ತಿದ್ದು ಮುಂದೆಯೂ ಸಂಸ್ಥೆ  ಕೆಲಸವನ್ನು ಮುಂದುವರೆಸಿಕೊಂಡು ಬರುತ್ತದೆ ಎಂದರು.
ನಾವು ನೀಡುವ ವಸ್ತು ಸದುಪಯೋಗವಾಗಬೇಕು ಆಗ ಮಾತ್ರ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ, ಜಿ.ಪಂ.ಸದಸ್ಯ ವೇಣುಗೋಪಾಲ್ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಭಾಗ್ಯಮ್ಮ ಪಾಪಣ್ಣ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ನಗಿನಾಭಿ, ಸಂಸ್ಥೆಯ ಸದಸ್ಯರಾದ ರಾಜೀವ್ ಗೌಡ, ದೀಪಕ್, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಆಂಜಿನಪ್ಪ, ಗುರುಪ್ರಕಾಶ್, ರಾಮಕೃಷ್ಣಪ್ಪ, ಈಶ್ವರ್, ಮುಖ್ಯ ಶಿಕ್ಷಕ  ಅರಸಯ್ಯ, ಶಿಕ್ಷಕರಾದ ಗುರುಪ್ರಕಾಶ್, ಸುಮ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement