ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ವ್ಯತ್ಯಯ: ಕರೂರ್ ಬ್ಯಾಂಕ್ ಎಟಿಎಂ ಯಂತ್ರಗಳಿಗೆ ಬೆಂಕಿ

Mainashree
Updated On : 21 Jun 2014, 10:57 am

ಆನೇಕಲ್ಲು: ತಾಲೂಕಿನ ಹೆಬ್ಬಗೋಡಿಯ ಜನ ನಿಬಿಡ ರಸ್ತೆಯಲ್ಲಿರುವ ಕರೂರು ವೈಶ್ಯ ಬ್ಯಾಂಕಿನ ಎಟಿಎಂ ಯಂತ್ರಗಳು ಅಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ಹೆಬ್ಬಗೋಡಿಯಲ್ಲಿ ಮೋಡ ಕವಿದು ಮಳೆ ಬೀಳುವ ಸೂಚನೆ ಇದ್ದಿತು. ಇದ್ದಕ್ಕಿದ್ದಂತೆ ಗಾಳಿ ಎದ್ದು ಮೋಡಗಳು ಚದುರಿದವು. ಆದರೆ ಗಾಳಿಯ ಆರ್ಭಟದಿಂದಾಗಿ ಕರೂರು ವೈಶ್ಯ ಬ್ಯಾಂಕ್ ಇರುವ ಕಟ್ಟಡದ 4ನೇ ಮಹಡಿ ಮೇಲೆ ಹಾಕಲಾಗಿದ್ದ ಪ್ಲೆಕ್ಸ್ ಬ್ಯಾನರ್ ಗಾಳಿಗೆ ಹಾರಿ ವಿದ್ಯುತ ಲೈನ್ ಮೇಲೆ ಬಿತ್ತು. ಸಮೀಪದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಶಾರ್ಟ್ ಸರ್ಕೀಟ್ ಆಗಿರಬಹುದೆಂದು ಬ್ಯಾಂಕಿನ ಸಿಬ್ಬಂದಿ ತಿಳಿಸಿದರು. ಕೂಡಲೇ ಅಗ್ನಿ ಶಾಮಕ ವಾಹನಕ್ಕೆ ಕರೆ ಮಾಡಿ ಕಟ್ಟಡಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ ನೀರು ಹಾಯಿಸಿ ಬೆಂಕಿಯನ್ನು ನಂದಿಸಲಾಯಿತು. ಸ್ಥಳದಲ್ಲಿದ್ದ ಮೂರೂ ಎಟಿಎಂ ಯಂತ್ರಗಳು ಬೆಂಕಿಗೆ ಆಹುತಿಯಾಗಿದ್ದು ಒಳಗಿದ್ದ ಹಣ ಸುಟ್ಟು ಹೋಗಿದೆಯೇ ಅಥವಾ ಹಾಗೆಯೇ ಇದೆಯೇ ಎಂಬುದು ತಿಳಿಯಬೇಕಿದೆ. ಒಂದೊಮ್ಮೆ ಬೆಂಕಿಯಿಂದ ಉಳಿದಿದ್ದರೂ ಬೆಂಕಿ ನಂದಿಸುವ ಕಾರ್ಯದಲ್ಲಿ ನೀರು ಹಾಯಿಸಿದ್ದರಿಂದ ನೆನೆದು ಮುದ್ದೆಯಾಗಿರಬಹುದೆಂಬ ಶಂಕೆಗೂ ಬ್ಯಾಂಕಿನ ಅಧಿಕಾರಿಗಳ ಬಳಿ ಉತ್ತರವಿಲ್ಲ. ಶಾರ್ಟ್ ಸರ್ಕೀಟ್ ಸುದ್ದಿ ತಿಳಿಯುತ್ತಿದ್ದಂತೆ ಜನರು ಬ್ಯಾಂಕಿನ ಮುಂದೆ ಜಮಾಯಿಸಿದರು. ಅಗ್ನಿ ಶಾಮಕ ವಾಹನ ಸ್ಥಳ ತಲುಪಲು ಕಷ್ಟಪಡಬೇಕಾಯಿತು. ಪೊಲೀಸರು ಜನರನ್ನು ಚದುರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement