ಮೆಟ್ರೋಗೆ ಹುಸಿ ಬಾಂಬ್ಕರೆ: ವದಂತಿ
ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ವದಂತಿ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೆಟ್ರೋ ನಿಲ್ದಾಣಕ್ಕೆ ಯಾವುದೇ ಬಾಂಬ್ ಬೆದರಿಕೆ ಕರೆ ಬಂದಿಲ್ಲ. ದೂರು ಕೂಡಾ ದಾಖಲಾಗಿಲ್ಲ ಎಂದು ಕಬ್ಬನ್ಪಾರ್ಕ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಬಾಂಬ್ ಬೆದರಿಕೆ ವದಂತಿ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಶ್ವಾನದಳ ಸಿಬ್ಬಂದಿ ನಿಲ್ದಾಣದಲ್ಲಿ ಕೆಲ ಕಾಲ ತಪಾಸಣೆ ನಡೆಸಿದರು. ಆದರೆ, ಬಳಿಕ ಅಂತಹ ಯಾವುದೇ ಕರೆ ಬಂದಿಲ್ಲ ಎನ್ನುವುದು ಗೊತ್ತಾಗಿದೆ. ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಎಂಆರ್ಸಿಎಲ್ ನಿರ್ದೇಶಕ ಪ್ರದೀಪ್ಸಿಂಗ್ ಖರೋಲಾ, ನಗರದ ಯಾವ ನಿಲ್ದಾಣಕ್ಕೂ ಬೆದರಿಕೆ ಕರೆ ಬಂದಿಲ್ಲ. ಪೊಲೀಸರು ನಡೆಸಿದ್ದು ಸಾಮಾನ್ಯ ತಪಾಸಣೆ ಎಂದಿದ್ದಾರೆ.