ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸೋಣ

Mainashree
Updated On : 24 Jun 2014, 10:44 am

ಮಾಗಡಿ :ಗ್ರಾಮೀಣ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ಕೆ.ಧನಂಜಯ ನುಡಿದರು.
ಅವರು ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಜೈ ಮಾರುತಿ ಕನ್ನಡ ಸಾಂಸ್ಕೃತಿಕ ಯುವಕರ ಸಂಘ ಏರ್ಪಡಿಸಿದ್ದ ಮಾರಮ್ಮ ದೇವಿ ದೇವಾಲಯದ ಕಟ್ಟಡ ಶಂಕುಸ್ಥಾಪನೆ ಮತ್ತು ಗ್ರಾಮೀಣ ಜನಪದ ಉತ್ಸವ ಹಾಗೂ ಕರಡಿ ಗುಚ್ಚಮ್ಮನ ಹರಿಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಯುವಕರು ದುಶ್ಚಟಗಳಿಂದ ದೂರ ಉಳಿದು, ಗ್ರಾಮಗಳಲ್ಲೇ ನೆಲೆಸುವ ಮೂಲಕ ಗ್ರಾಮಾಭಿವೃದ್ಧಿಗೆ ದುಡಿದು ಮಾದರಿಯಾಗಿ ನಿಲ್ಲಬೇಕು. ಸಂಘಟನೆಗಳು ಸಹ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಮಹಾತ್ಮ ಗಾಂಧೀಜಿ ಅವರು ಕಂಡಂತಹ ಭರತಖಂಡ ರಾಮರಾಜ್ಯವಾಗುವುದರಲ್ಲಿ ಸಂಶಯವಿಲ್ಲ ಎಂದರು. ಗ್ರಾಮೀಣ ಭಾಗದಲ್ಲಿ ಪಾರಂಪರಿಕ ಕಲಾವಿದರು ಇರುವುದರಿಂದ ಜಾನಪದ ಕಲೆ ಇನ್ನೂ ಜೀವಂತವಾಗಿದೆ. ಹಿರಿಯ ಕಲಾವಿದರಿಗೆ  ಸರ್ಕಾರದ ವತಿಯಿಂದ ಸೌಲತ್ತು ಕಲ್ಪಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ಬಿಡಿಸಿಸಿ ಬ್ಯಾಂಕ್ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್  ಮಾತನಾಡಿ, ಯುವಕರು ಒಗ್ಗಟ್ಟಾಗಿ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ರಾಜ್ಯ ಒಕ್ಕಲಿಗರಸಂಘದ ಉಪಾಧ್ಯಕ್ಷ ಆ.ದೇವೇಗೌಡ ಮಾತನಾಡಿದರು. ಹಿರಿಯ ಮುಖಂಡ ಎಂ. ರೇವಣ್ಣ ಧಾರ್ಮಿಕ ಆಚರಣೆ ಕುರಿತು ಮಾತನಾಡಿದರು.
ಜೈ ಮಾರುತಿ ಕನ್ನಡ ಸಾಂಸ್ಕೃತಿಕ ಯುವಕರ ಸಂಘದ ಅಧ್ಯಕ್ಷ ಗುಡ್ಡಯ್ಯ ಪ್ರಾಸ್ತಾವಿಕ ಮಾತನಾಡಿ ದರು.  ಗ್ರಾ.ಪಂ. ಸದಸ್ಯ ಬೆಂಕಿ ಮಹದೇವ್, ಚಕ್ರಭಾವಿ ಬೈರಪ್ಪ, ಡಾ. ಚಂದ್ರಶೇಖರ್, ಸಿಡಿಪಿಓ ಇಲಾಖೆಯ ಎಸಿಡಿಪಿಓ ಮಾಲಾ, ಮಾನಮ್ಮ, ಗೀತಾ, ಸಂಘದ ಕಾರ್ಯದರ್ಶಿ ಶಾಂತಮ್ಮ,ಉಪಾಧ್ಯಕ್ಷ ಪ್ರತಾಪ್, ಖಜಾಂಚಿ ರಾಜೇಶ್ ರಂಗಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement