ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪದಗಳ ಜೋಡಣೆಯೇ ಕವಿತೆ: ಹುಚ್ಚಯ್ಯನದೊಡ್ಡಿ ರಮೇಶ್

Mainashree
Updated On : 26 Jun 2014, 10:58 am

ಚನ್ನಪಟ್ಟಣ: ಕವಿಗೆ ಉಂಟಾಗುವ ವಿಶೇಷಾನುಭವವನ್ನು ಶಿಷ್ಟ ರೂಪದಲ್ಲಿ ಕಟ್ಟಿ ಕೊಟ್ಟು ಓದುಗ ಸಹೃದಯರಿಗೂ ವಿಶೇಷಾನುಭವವಾಗುವಂತೆ ಮಾಡುವ ಪದಗಳ ಜೋಡಣೆಯೇ ಕವಿತೆ. ಇತ್ತೀಚಿನ ಕವಿಗಳು ಈ ಮಾನದಂಡವನ್ನು ಬಿಟ್ಟು ಮನಸ್ಸಿಗೆ ಬಂದಂತೆ ಗೀಚುತ್ತಿರುವುದರಿಂದ ಸಾಹಿತ್ಯದ ಬಗ್ಗೆ ಶ್ರೀಸಾಮಾನ್ಯ ಆಸಕ್ತಿ ಕಳೆದುಕೊಳ್ಳುವಂತಾಗಿದೆ ಎಂದು ಕನ್ನಡ ಉಪನ್ಯಾಸಕ ಹುಚ್ಚಯ್ಯನ ದೊಡ್ಡಿ ರಮೇಶ್ ಅಭಿಪ್ರಾಯಪಟ್ಟರು.ಇಲ್ಲಿನ ಲಕ್ಷ್ಮೀ ಆಸ್ಪತ್ರೆ ಆವರಣದಲ್ಲಿ  ಸನ್‌ರೈಸ್ ಟ್ರಸ್ಟ್ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಕುರಿತೋದದೆ ಕಾವ್ಯ ಪ್ರಯೋಗ ಪರಿಣತರು ಎಂದು ಕನ್ನಡಿಗರ ಕಾವ್ಯ ವಿಶೇಷತೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಕವಿರಾಜ ಮಾರ್ಗ ಕೃತಿಸಾರಿ ಹೇಳಿದೆ. ಕನ್ನಡಿಗರಲ್ಲಿ ಸ್ವಭಾವತಃ ಕಾವ್ಯ ಬಗ್ಗೆ ಆಸಕ್ತಿ ಮತ್ತು ರಚಿಸುವ ಉತ್ಸಾಹ ಗಳೆರಡೂ ಇವೆ. ಆದರೆ ಕೆಲ ಮಂದಿ ಸಾಂಕೇತಿಕವಾಗಿ ಕಾವ್ಯ ರಚನೆಯಲ್ಲಿ ತೊಡಗುವುದರಿಂದ ಕಾವ್ಯದ ಸೊಗಡಿಗೆ ಧಕ್ಕೆಯಾಗುತ್ತಿದೆ ಎಂದರು.ನಗರಸಭಾ ಉಪಾಧ್ಯಕ್ಷ ಬಿ.ಪಿ.ಮುದ್ದುಕೃಷ್ಣೇಗೌಡ, ಕಸಾಪ ನಿಕಟ ಪೂರ್ವ ಅಧ್ಯಕ್ಷ ತೋಟದ ಮನೆ ಕೃಷ್ಣೇಗೌಡ, ವೈದ್ಯೆ ಡಾ.ಪ್ರಮಿಳಾ ಸಿದ್ದೇಗೌಡ, ಕೆ.ಎಂ.ರಾಜು, ಶ್ರೀನಿವಾಸ ರಾಂಪುರ, ವಿಜಯ್ ರಾಂಪುರ  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement