ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭೂ ನ್ಯಾಯ ಮಂಡಳಿ ರಚನೆಗೆ ರೈತರ ಆಗ್ರಹ

Mainashree
Updated On : 26 Jun 2014, 10:57 am

ಮಾಗಡಿ: ಕಳೆದ 20 ವರ್ಷಗಳಿಂದಲೂ ಸರ್ಕಾರ ಭೂ ನ್ಯಾಯ ಮಂಡಲಿಯ ಸಮಿತಿ ರಚಿಸದೆ ಇರುವುದರಿಂದ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೆ ರೈತರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಎಂದು ರೈತ ನೀಲಕಂಠಯ್ಯ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
 ಕಳೆದ ಬಿಜೆಪಿ ಸರ್ಕಾರ ಭೂ ನ್ಯಾಯ ಮಂಡಲಿ ಸಮಿತಿ ರಚಿಸದೆ ನೂರಾರು ರೈತರಿಗೆ ಅನ್ಯಾಯವಾಗಿದೆ. ಇದರಲ್ಲಿ ಬಹುತೇಕ ರೈತರು ಸಾವನ್ನಪ್ಪಿದ್ದಾರೆ. ಉಳಿದ ರೈತರಿಗಾದರೂ ಭೂ ನ್ಯಾಯ ಮಂಡಲಿ ಸಮಿತಿ  ರಚನೆಯಾಗಿ ಆದಷ್ಟು ಬೇಗ ರೈತರಿಗೆ ನ್ಯಾಯ ದೊರಕಿಸಿಕೊಡಲು ಕಾಂಗ್ರೆಸ್  ಸರ್ಕಾರವಾದರೂ ಕೂಡಲೆ ತಾಲೂಕು ಮಟ್ಟದ ಭೂ ನ್ಯಾಯಮಂಡಲಿ ಸಮಿತಿ ರಚಿಸುವ ಮೂಲಕ ರೈತರ ಭೂಮಿಗೆ ಸಂಬಂಧಿಸಿದ ಪ್ರಕರಣಗಳ ಇತ್ಯರ್ಥಗೊಳಿಸಬೇಕೆಂದು ನೂರಾರು ರೈತರ ಆಗ್ರಹವಾಗಿದೆ ರೈತ ನೀಲಕಂಠಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಚ್ಛ ಗ್ರಾಮ ಕಾರ್ಯಾಗಾರ: ಭೂಮಿ ಫಲವತ್ತತೆ ಕಾಪಾಡಿಕೊಂಡು, ಸಮೃದ್ಧ ಫಸಲು ಬೆಳೆಯುವ ಮೂಲಕ ದೇಶದ ಆರ್ಥಿಕ ಸ್ವಾವಲಂಬನೆಗೆ ನಾಂದಿ ಹಾಡಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಮುದ್ದುರಾಜ ಯಾದವ್ ಕರೆ ನೀಡಿದರು. ಅವರು ತಾಲೂಕಿನ ಬಾಳೇನಹಳ್ಳಿಯಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಗುಚ್ಚಗ್ರಾಮಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಇದೇ ವೇಳೆ ಸುಮಾರು 200 ಪಲಾನುಭವಿಗಳಿಗೆ ಕೃಷಿ ಇಲಾಖೆ ವತಿಯಿಂದ ಉಚಿತವಾಗಿ ಬಿತ್ತನೆ ಬೀಜ ಮತ್ತು ಲಘು ಪೋಷಕಾಂಶಗಳ ಕಿಟ್ಟನ್ನು ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ವಿತರಿಸಿದರು.ಹೇಳಿಗೆಹಳ್ಳಿ ಗ್ರಾಪಂ ಅಧ್ಯಕ್ಷ ಶಿವಣ್ಣ, ಪ್ರಗತಿಪರ ರೈತ ಚಿಕ್ಕಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement