ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೆಂಕಟರಂಗಪ್ಪ ರಾಮನಗರ ತಾಪಂ ಹಂಗಾಮಿ ಅಧ್ಯಕ್ಷ

Mainashree
Updated On : 26 Jun 2014, 10:57 am

ಕ.ಪ್ರ.ವಾರ್ತೆ ರಾಮನಗರ  ಜೂ.26
ತಾಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿ ಲಕ್ಷ್ಮೀಪುರ ಕ್ಷೇತ್ರದ ಜೆಡಿಎಸ್ ಸದಸ್ಯ ವೆಂಕಟರಂಗಪ್ಪ ಗುರುವಾರ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷೆ ಲಕ್ಷ್ಮೀಮಂಜುನಾಥ್ ಮತ್ತು ಉಪಾಧ್ಯಕ್ಷ ಕೆ.ಎಸ್.ಶಂಕರಯ್ಯ ಅವರ ಅಧಿಕಾರಾವಧಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ವಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ವೆಂಕಟರಂಗಪ್ಪ ಅಧ್ಯಕ್ಷ ಹುದ್ದೆಗೇರಿದ್ದಾರೆ.
 ಕಡೆಯ 20 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಚುನಾವಣೆಗೆ ದಿನಾಂಕ ನಿಗದಿಪಡಿಸಿಲ್ಲವಾದ್ದರಿಂದ ಈ ಸ್ಥಾನಗಳು ತೆರವುಗೊಂಡಿದ್ದವು.
 ತಾಲೂಕು ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎಚ್.ವೆಂಕಟೇಶ್ ಅವರು ವೆಂಕಟರಂಗಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿರ್ಗಮನ ಅಧ್ಯಕ್ಷೆ ಲಕ್ಷ್ಮೀಮಂಜುನಾಥ್ ಹಾಗೂ ಉಪಾಧ್ಯಕ್ಷ ಶಂಕರಯ್ಯ ಸಮಾರಂಭಕ್ಕೆ ಗೈರಾಗಿದ್ದರು. ಈ ಸಂದರ್ಭದಲ್ಲಿ ಸದಸ್ಯರಾದ ಶಿವಪ್ರಸಾದ್, ಸಿದ್ದಲಿಂಗೇಗೌಡ, ಸುಜಾತ ಶಿವಲಿಂಗಪ್ಪ, ಭದ್ರಯ್ಯ, ಶೀಲಮ್ಮ ಸೇರಿದಂತೆ ಜೆಡಿಎಸ್ ಮುಖಂಡರು ವೆಂಕಟರಂಗಯ್ಯ ಅವರನ್ನು ಅಭಿನಂದಿಸಿದರು.
ಕನಸಲ್ಲೂ ಕಂಡಿರಲಿಲ್ಲ: ತಾ.ಪಂ. ಅಧ್ಯಕ್ಷನಾಗುವುದನ್ನು ನಾನು ಕನಸಲ್ಲೂ ಕಂಡಿರಲಿಲ್ಲ. ಆಕಸ್ಮಿಕವಾಗಿ ಬಯಸದೇ ಬಂದಿರುವ ಈ ಹುದ್ದೆಯನ್ನು ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಹಂಗಾಮಿ ಅಧ್ಯಕ್ಷ ವೆಂಕಟರಂಗಯ್ಯ ತಿಳಿಸಿದರು.
 ಶಿಕ್ಷಕನಾಗಿ ನಿವೃತ್ತನಾಗಿದ್ದ ನನಗೆ ರಾಜಕೀಯಕ್ಕೆ ಕರೆತಂದು ತಾಪಂ ಅಧ್ಯಕ್ಷ ಹುದ್ದೆಗೇರುವ ಅವಕಾಶ ನೀಡಿದ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿಕುಮಾರಸ್ವಾಮಿ, ಎಚ್.ಸಿ.ಬಾಲಕೃಷ್ಣ ಅವರಿಗೆ ವೆಂಕಟರಂಗಯ್ಯ ಕೃತಜ್ಞತೆ ಅರ್ಪಿಸಿದರು. ತಾಲೂಕಿನಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಬವಣೆ ನೀಗಿಸಲು ಕಂಡ ಕಂಡ ಕಡೆಯೆಲ್ಲಾ ಕೊಳವೆ ಬಾವಿ ಕೊರೆಸಿ ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ. ಜಿಯೋಲಾಜಿಸ್ಟ್ ಅವರು ಸರ್ವೆ ಮಾಡಿ, ಪಾಯಿಂಟ್ ನೀಡಿದ ಮೇಲೆಯೇ ಕೊಳವೆ ಬಾವಿ ಕೊರೆಸಬೇಕು. ಗುಣಮಟ್ಟದ ಪಂಪ್ ಮತ್ತು ಮೋಟಾರನ್ನು ಅಳವಡಿಸಿದಲ್ಲಿ ಸ್ವಲ್ಪ ಮಟ್ಟಿಗಾದರೂ ಹಣದ ಅಪವ್ಯಯವನ್ನು ತಡೆಯಬಹುದು. ಅಧಿಕಾರಿಗಳು ಈ ಕಾರ್ಯಕ್ಕೆ ಮುಂದಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement