ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಷೀಣಿಸುತ್ತಿದೆ ಪುಸ್ತಕ ಸಂಸ್ಕೃತಿಕೆ.ಶೇಷಾದ್ರಿ ಅಭಿಮತ

Rashmi Kasaragodu
Updated On : 2 Mar 2014, 1:24 am

ರಾಮನಗರ: ಇಂದಿನ ದಿನಗಳಲ್ಲಿ ಪುಸ್ತಕ ಸಂಸ್ಕ್ತೃತಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಕರು  ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
   ನಗರದ ಸ್ಫೂರ್ತಿ ಭವನದಲ್ಲಿ ಅಂಕನಹಳ್ಳಿ ಪ್ರಕಾಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉಪನ್ಯಾಸಕ ಜಿ.ಶಿವಣ್ಣ ಅವರು ರಚಿಸಿರುವ ಪುಸ್ತಕ ಬಿಡುಗಡೆ ಹಾಗೂ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನವಾಗುವುದು ಎಂದರು.
  ಗಾಂಧಿ, ಬುದ್ಧ, ಅಂಬೇಡ್ಕರ್ ಅವರು ಪ್ರಪಂಚದ ಶ್ರೇಷ್ಠ ದಾರ್ಶನಿಕರಾಗಿದ್ದಾರೆ.
  ಅವರ ಆತ್ಮ ಚರಿತ್ರೆಯನ್ನು ಓದಿ, ಮನನ ಮಾಡಿಕೊಳ್ಳಬೇಕು. ಅವರ ಚಿಂತನೆಗಳನ್ನು ಮೈಗೊಡಿಸಿಕೊಳ್ಳಬೇಕು. ಕಾಯಕ ಸಂಸ್ಕೃತಿ ನಮ್ಮ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement