ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಛಲವಾದಿ ಸಮಾಜ ಅಭಿವೃದ್ಧಿಗೆ ಒತ್ತಾಯ: ಡಿ.ಕೃಷ್ಣಪ್ಪ

Rashmi Kasaragodu
Updated On : 2 Mar 2014, 1:25 am

ರಾಮನಗರ: ಸಾಮಾಜಿಕ ಪಿಡುಗುಗಳಿಂದ ಬಾಧಿತವಾಗಿರುವ ಛಲವಾದಿ ಜನಾಂಗದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದಿದ್ದು, ಸೂಕ್ತ ಸ್ಥಾನಮಾನ ನೀಡುವಂತೆ ರಾಜ್ಯ ಮಟ್ಟದ ಸಮಾವೇಶದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಛಲವಾದಿ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಕೃಷ್ಣಪ್ಪ ತಿಳಿಸಿದರು.
ರಾಜ್ಯಾದ್ಯಂತ ಸುಮಾರು 40 ಲಕ್ಷಕ್ಕೂ ಅಧಿಕವಿರುವ ಛಲವಾದಿ ಜನಾಂಗವನ್ನು ಇಂದಿಗೂ ಅಸ್ಪೃಶ್ಯತೆ, ಬಹಿಷ್ಕಾರಗಳಂತಹ ಸಾಮಾಜಿಕ ಅನಿಷ್‌ಠಗಳು ಕಾಡುತ್ತಿವೆ. ಸಂವಿಧಾನದ ಆಶಯದಂತೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಗಳಿಸುವಲ್ಲಿ ವಿಫಲವಾಗಿದ್ದು, ಇದಕ್ಕೆ ಜನಾಂಗದಲ್ಲಿ ಒಗ್ಗಟ್ಟು ಮೂಡದಿರುವುದೇ ಕಾರಣವಾಗಿದೆ. ರಾಜ್ಯಾದ್ಯಂತ ಜನಾಂಗವನ್ನು ಸಂಘಟಿಸಲು ಬೆಂಗಳೂರಿನಲ್ಲಿ ಮಾ.2ರಂದು ಬೃಹತ್ ಬಾಗೂ ಐತಿಹಾಸಿಕ ಸಮಾವೇಶ  ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಛಲವಾದಿ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಂ  ತವರು ಜಿಲ್ಲೆ ರಾಮನಗರದಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಜನರನ್ನು ಸಮಾವೇಶಕ್ಕೆ ಕರೆದೊಯ್ಯಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement