ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಥಲೀಕರಣ ಕೇಂದ್ರಗಳ ಉದ್ಘಾಟನೆ

Rashmi Kasaragodu
Updated On : 2 Mar 2014, 1:24 am

ರಾಮನಗರ: ರಾಷ್ಟ್ರೀಯ ಹೈನು ಅಭಿವೃದ್ಧಿ ಯೋಜನೆಯಡಿ ರಾಮನಗರ ತಾಲೂಕಿನ ಕೂಟಲ್ ಹೋಬಳಿಯ 13 ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಹಾಲು ಶಿಥಲೀಕರಣ ಘಟಕಗಳಿಗೆ ಸಂಸದ ಡಿ.ಕೆ. ಸುರೇಶ್ ಶನಿವಾರ ಚಾಲನೆ ನೀಡಿದರು.  ಜೋಗಿದೊಡ್ಡಿ, ಗುಂಗರಹಳ್ಳಿ, ಯರೆಹಳ್ಳಿ, ಶಾನುಭೋಗನಹಳ್ಳಿ, ಕ್ಯಾಸಾಪುರ, ದೊಡ್ಡಗಂಗವಾಡಿ, ಅಕ್ಕೂರು, ಜಾಲಮಂಗಲ, ತಡಿಕವಾಗಿಲು, ಹೊಂಬೇಗೌಡನದೊಡ್ಡಿ, ಚಾಮನಹಳ್ಳಿ,ಕೂಟಗಲ್, ಹಾಗೂ ಕೆಂಪವಡೇರಹಳ್ಳಿ ಗ್ರಾಮಗಳಲ್ಲಿ ರು.1.08 ಕೋಟಿ ವೆಚ್ಚದಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿದೆ.  ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿರುವ ಈ ಶಿಥಲೀಕರಣ ಕೇಂದ್ರದಿಂದ ಸಂಗ್ರಹವಾದ 2-3 ದಿನವಾದರೂ  ಹಾಲು ಕೆಡುವುದಿಲ್ಲ. ರಾಷ್ಟ್ರಾದ್ಯಂತ ಇಂತಹ ಘಟಕಗಳ ನಿರ್ಮಾಣಕ್ಕೆ ಸುಮಾರು ರು.7500 ಕೋಟಿ ಬಿಡುಗಡೆಯಾಗಿದೆ ಎಂದು ಸುರೇಶ್ ತಿಳಿಸಿದರು. ಕಾಲುಬಾಯಿ ಜ್ವರದಿಂದ ಮರಣಹೊಂದಿದ ರಾಸುಗಳಿಗೆ ಚೆಕ್ ವಿತರಿಸಲಾಯಿತು.


ವಾಣಿಜ್ಯ ಬೆಳೆಗೆ
ಪ್ರೋತ್ಸಾಹಿಸಿ


ರಾಮನಗರ: ಸಾಂಪ್ರದಾಯಿಕ ಕೃಷಿ ಪದ್ಧತಿಯ ಬದಲು ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಒತ್ತು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಸವಲತ್ತು ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಅಧಿಕಾರಿಗಳಿಗೆ ಸೂಚಿಸಿದರು.  ಜಿಲ್ಲಾ ಪಂಚಾಯಿತಿ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಪ್ರಗತಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಕುಡಿಯುವ ನೀರು ಮತ್ತು ಜಲಾನಯನ ಅಭಿವೃದ್ಧಿಗೆ ಆದ್ಯತೆ ನೀಡಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.  ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಳ, ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಕೃಷಿ ಬಗ್ಗೆ ರೈತರಿಗೆ ಅಗತ್ಯ ಸಲಹೆ ಮತ್ತು ಪ್ರೋತ್ಸಾಹ ನೀಡಬೇಕು. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಹಾಗೂ ಜಿ.ಪಂ. ಸಿಇಒ ಡಾ.ವೆಂಕಟೇಶ್ ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement