ಸುರಕ್ಷತಾ ಕ್ರಮಗಳಿಂದ ಏಡ್ಸ್ ತಡೆಯಲು ಸಾಧ್ಯ
ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೇತೃತ್ವದಲ್ಲಿ ಬೆಂಗಳೂರಿನ ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಏಡ್ಸ್ ಜಾಗೃತಿ ಜಾಥಾ ಮತ್ತು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿ ರಮೇಶ್ ಮಾತನಾಡಿದರು. ಎನ್ಎಸ್ಎಸ್ ಸಲಹಾಸಮಿತಿ ಸದಸ್ಯ ಪ್ರೊ.ರಂಗಸ್ವಾಮಿ ಬೆಳಕವಾಡಿ, ಎನ್ಸಿಸಿ ಅಧಿಕಾರಿ ಪ್ರೊ.ಬಿ.ಟಿ.ತಜಮುಲ್ ಪಾಷಾ, ವೈದ್ಯಕೀಯ ತಜ್ಞ ರಾಜೇಂದ್ರ, ಎನ್ಎಸ್ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.