ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಆಧುನಿಕ ಜೀವನ ಶೈಲಿಯಿಂದ ಅಪಾಯ'

Mainashree
Updated On : 2 Mar 2014, 11:04 am

ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ನೇತೃತ್ವದಲ್ಲಿ ಶಾಲೆಯ 63ನೇ ವಾರ್ಷಿಕೋತ್ಸವ ಮತ್ತು ದೇಹದಾರ್ಢ್ಯ ಸ್ಪರ್ಧಾ ಕಾರ್ಯಕ್ರಮ ಕುಚ್ಚಪ್ಪನಪೇಟೆಯಲ್ಲಿರುವ ವ್ಯಾಯಾಮಶಾಲೆ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಭಾಗವಹಿಸಿದ್ದರು. ಅವರು ಮಾತನಾಡಿ ವ್ಯಾಯಾಮ ಶಾಲೆಗಳಿಗೆ ಸರ್ಕಾರದ ಅನುದಾನ ಬಿಡುಗಡೆಯಾಗಿದ್ದು, ಅಧಿಕೃತ ವ್ಯಾಯಾಮಶಾಲೆಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವ್ಯಾಯಾಮ ಶಾಲೆ ಹಿರಿಯ ಸದಸ್ಯರಾದ ಬಿ.ಜಿ.ಗೋಪಾಲ್, ಎಂ.ಎನ್.ಕೇಶವರಾಜ್, ಕೆ.ಜಿ.ಗೋಪಿನಾಥ್, ಎಚ್.ಡಿ.ರಘುನಾಥ್, ಕೆ.ಆರ್.ಗೋಪಾಲಕೃಷ್ಣ ಮತ್ತಿತರರನ್ನು ಸನ್ಮಾನಿಸಲಾಯಿತು. ವ್ಯಾಯಾಮಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ವ್ಯಾಯಾಮ ಸ್ಪರ್ಧೆಗಳಲ್ಲಿ ಡಿ.ನಟರಾಜ್(ಸೀನಿಯರ್), ಪ್ರದೀಪ್ ಕುಮಾರ್(ಜೂನಿಯರ್) ಚಾಂಪಿಯನ್‌ಷಿಪ್ ಪಡೆದರು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ.ಗುರುದೇವ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಪಿ.ಸಿ.ಲಕ್ಷ್ಮೀನಾರಾಯಣ್, ಲೋಕೇಶ್‌ಬಾಬು, ವಿದ್ಯುತ್ ಮಗ್ಗಗಳ ನಿಗಮದ ಸದಸ್ಯ ಕೆ.ಜಿ.ಅಶೋಕ್, ತಾ.ಕಸಾಪ ಅಧ್ಯಕ್ಷ ಶ್ರೀಕಾಂತ, ವ್ಯಾಯಾಮ ಶಾಲೆ ಟ್ರಸ್ಟಿಗಳಾದ ಎಂ.ಎನ್. ಶಿವಶಂಕರ್, ಎ.ಆರ್.ಕೃಷ್ಣಮೂರ್ತಿ, ಎಚ್.ಎಸ್. ಸನಾತನಮೂರ್ತಿ, ಆರ್.ಕೃಷ್ಣಮೂರ್ತಿ, ಕಾರ್ಯದರ್ಶಿ ಆರ್.ಮನೋಜ್, ವಿಶ್ವನಾಥ್, ಮುರಳಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement