ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 2 Mar 2014, 11:05 am

ಪರೀಕ್ಷೆ ವೇಳೆ ವಿದ್ಯುತ್ ಕಣ್ಣಾಮುಚ್ಚಾಲೆ
ಸೂಲಿಬೆಲೆ: ಹೊಸಕೋಟೆ ತಾ.ನ ನಂದಗುಡಿ  ಹೋಬಳಿಯ  ತಾವರೆಕೆರೆ  ಗ್ರಾಮದ ಸುತ್ತಮುತ್ತಲ್ಲಿನ  ಹಳ್ಳಿಗಳಲ್ಲಿ  ಕಳೆದ ಕೆಲ ದಿನಗಳಿಂದ ವಿದ್ಯುತ್ ಸಮರ್ಪಕವಾಗಿ  ಸರಬರಾಜಾಗದೇ  ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದು, ಪರೀಕ್ಷೆ   ದಿನಗಳಾಗಿರುವ   ಕಾರಣ  ವಿದ್ಯಾರ್ಥಿಗಳ ಭವಿಷ್ಯ  ಅಂಧಕಾರ ಆವರಿಸಿಕೊಂಡಂತಾಗಿದೆ  ಎಂದು ಪೋಷಕರು ಆರೋಪಿಸಿದ್ದಾರೆ. ಗ್ರಾಮದಲ್ಲಿ ದಿನಕ್ಕೆ 3-4ತಾಸು ಮಾತ್ರ ವಿದ್ಯುತ್ ಸರಬರಾಜಾಗುತ್ತಿದ್ದು, ರೈತರು, ವಿದ್ಯಾರ್ಥಿಗಳು ನಿತ್ಯ  ವಿದ್ಯುತ್‌ಗಾಗಿ ಕಾಯುವಂತಾಗಿದೆ. ಅಲ್ಪ ವೇಳೆ ನೀಡುವ ವಿದ್ಯುತ್‌ನಲ್ಲಿಯೂ ಆಗಾಗ್ಗೆ  ಕಡಿತ ಮಾಡಲಾಗುತ್ತಿದೆ. ಸಕಾಲಕ್ಕೆ   ವಿದ್ಯುತ್ ಇಲ್ಲದೇ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ. ಇದರಿಂದ ಸಕಾಲ ನೀರು ಸಿಗದೆ ಜನ ಪರದಾಟ ನಡೆಸುವಂತಾಗಿದೆ. ಮಾರ್ಚ್ ಮೊದಲ ವಾರದಿಂದಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ರಾತ್ರಿ ವೇಳೆ ಪರೀಕ್ಷೆಗೆ ಓದಿಕೊಳ್ಳಲು ವಿದ್ಯುತ್ ಇಲ್ಲದೇ ಮಕ್ಕಳು ಮೊಂಬತ್ತಿಯ ಬೆಳಕನ್ನು ಆಶ್ರಯಿಸುವಂತಾಗಿದೆ. ವಿದ್ಯುತ್ ಕೈಕೊಟ್ಟು ವಿದ್ಯಾರ್ಥಿಗಳ ಭವಿಷ್ಯತ್ತಿನಲ್ಲಿ ಬೆಸ್ಕಾಂ ಆಟವಾಡುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯತ್ತು ಅಂಧಕಾರಕ್ಕೆ ಇಳಿಯುವಂತಾಗಿದೆ ಎಂದು ಪೋಷಕರು  ಆಕ್ರೋಶ ಪಡಿಸಿದ್ದಾರೆ. ತಾವರೆಕೆರೆ ಗ್ರಾಮದ ಅಕ್ಕಪಕ್ಕದ ಗ್ರಾಮಗಳಾದ ಹೆತ್ತಕ್ಕಿ, ಮುಗಬಾಳ ಗ್ರಾಮಗಳಲ್ಲಿ 24  ಗಂಟೆ ವಿದ್ಯುತ್ ಪ್ರಸಾರವಾಗುತ್ತಿದ್ದು, ಈ ಎಲ್ಲ ಗ್ರಾಮಗಳಿಗೆ ಕೇಂದ್ರವಾಗಿರುವ ತಾವರೆಕೆರೆ ಗ್ರಾಮದಲ್ಲಿ ಮಾತ್ರ ವಿದ್ಯುತ್ ಕಣ್ಣಾಮುಚ್ಚಾಲೆ  ಆಟವಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಕ್ಕು ಬಾಧ್ಯತಾ, ಆಕ್ಷೇಪಣೆಗೆ ಅರ್ಜಿ
ಸೂಲಿಬೆಲೆ: ಸೂಲಿಬೆಲೆ ಮತ್ತು ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿ  ಗ್ರಾಮಗಳಿಗೆ ಸಂಬಂಧಿಸಿದಂತೆ ಕರಡು ಆರ್ಥಿಕ ಜಾತಿ ಗಣತಿ ಪಟ್ಟಿ ಪಂಚಾಯಿತಿ  ಕಚೇರಿಯಲ್ಲಿ  ಲಭ್ಯವಿದ್ದು, ಸಾರ್ವಜನಿಕರು ಪಟ್ಟಿಯನ್ನು ಪರಿಶೀಲನೆ ನಡೆಸಿ ಆಕ್ಷೇಪಣೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಗ್ರಾಪಂ ಪ್ರಕಟಣಿಯಲ್ಲಿ ತಿಳಿಸಿದೆ. ಸೂಲಿಬೆಲೆ ಗ್ರಾ.ಪಂ.ದ ಕದನಪುರ ,ರಾಂಪುರ  ಮತ್ತು ಗಿಡ್ಡಪ್ಪನಹಳ್ಳಿ  ಗ್ರಾ.ಪಂ. ವ್ಯಾಪ್ತಿಯ ಯನಗುಂಟೆ, ಅತ್ತಿಬೆಲೆ, ಸಾದಪ್ಪನಹಳ್ಳಿ, ವಳಗೆರೆಪುರ, ಗಿಡ್ಡಪ್ಪನಹಳ್ಳಿ, ಸಿದ್ದೇನಹಳ್ಳಿ, ಬೆಟ್ಟಹಳ್ಳಿ, ಅಂಕೋನಹಳ್ಳಿ, ನಲ್ಲಾಗನಹಳ್ಳಿ ಮತ್ತು ಅರಸನಹಳ್ಳಿ ಗ್ರಾಮಗಳಿಗೆ ಸಂಬಂಧಿದಂತೆ ಕರಡು ಆರ್ಥಿಕ ಜಾತಿ ಗಣತಿ ಪಟ್ಟಿ ಲಭ್ಯವಿದ್ದು, ಇದನ್ನು ಈ ಮೇಲ್ಕಂಡ ಗ್ರಾಮದ ಸಾರ್ವಜನಿಕರು ಪರಿಶೀಲನೆ ಮಾಡಿ ಹಕ್ಕು ಬಾದ್ಯತಾ ಮತ್ತು ಆಕ್ಷೇಪಣಾ ಅರ್ಜಿಗಳನ್ನು ಮಾ. 10ರೊಳಗೆ ಸೂಲಿಬೆಲೆ ಮತ್ತು ಗಿಡ್ಡಪ್ಪನಹಳ್ಳಿ ಗ್ರಾ.ಪಂ.ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವನಹಳ್ಳಿ ರೇಲ್ವೆ ರಿಸರ್ವೇಷನ್ ವ್ಯವಸ್ಥೆಗೆ ಮೊಯ್ಲಿ ಚಾಲನೆ
ದೇವನಹಳ್ಳಿ: ಇಲ್ಲಿನ ಆದರ್ಶ ರೈಲು ನಿಲ್ದಾಣದಲ್ಲಿ ಗಣಕೀಕೃತ ಪ್ರಯಾಣಿಕರ ಕಾದಿರುಸುವಿಕೆ ವ್ಯವಸ್ಥೆಗೆ ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯ್ಲಿ ಭಾನುವಾರ ಚಾಲನೆ ನೀಡಿದರು. ಕಳೆದ ಐದು ವರ್ಷಗಳಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ರೈಲು ನಿಲ್ದಾಣಗಳು ಆದರ್ಶ ಸ್ಟೇಷನ್‌ಗಳಾಗಿ ರೈಲ್ವೆ ಸುವರ್ಣಯಗ ಆಗಿದೆ ಎಂದು ಮೊಯ್ಲಿ ತಿಳಿಸಿ ಚಿಕ್ಕಬಳ್ಳಾಪುರ ಕೋಲಾರ ಬ್ರಾಡ್‌ಗೇಜ್ ಆಗಿ ರೈಲು ಸಂಚಾರ ಆರಂಭಿಸಿದೆ. ಚಿಕ್ಕಬಳ್ಳಾಪುರ ಪುಟ್ಟಪರ್ತಿ ಹೊಸಮಾರ್ಗಕ್ಕೆ ಈಗಾಗಲೇ ಮಂಜೂರಾತಿ ದೊರೆತಿದೆ, ಯಲಹಂಕ ಬಳಿಯ ಅಳ್ಳಾಳಸಂದ್ರ ಮೇಲ್ಸೇತುವೆ ಕಾರ್ಯ ಆಗಿದೆ. ರಾಜಾನುಕುಂಟೆ ಮೇಲ್ಸೇತುವೆಗೆ ಹಣ ಮಂಜೂರಾಗಿದೆ. ಕೋಲಾರದ ಬಳಿ ಒಂದು ಸಾವಿರ ಕೋಟಿ ರೈಲು ಕೋಚ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿರುವುದರಿಂದ ಸಚಿವ ಮಲ್ಲಿಕಾರ್ಜು ಖರ್ಗೆ ಹಾಗೂ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದೇ ಸಂಧರ್ಭದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಅಭಿನಂದಿಸಿದರಲ್ಲದೆ ಎತ್ತಿನಹೊಳೆ ಯೋಜನೆಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸುತ್ತಿರುವುದಕ್ಕೆ ಸ್ವಾಗತಿಸುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement