ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

17ರಂದು ಮಾಗಡಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Vishwanath S
Updated On : 12 Mar 2014, 1:30 am

ಮಾಗಡಿ: ಮಾಗಡಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಾ.17 ರಂದು ನಡೆಸಲು ಅದಧಿಸೂಚನೆ ಹೊರಡಿಸಲಾಗಿದೆ ಎಂದು ತಾಲೂಕು ತಹಸೀಲ್ದಾರ್ ಶಿವಕುಮಾರ್ ತಿಳಿಸಿದ್ದಾರೆ.
ಮಾಗಡಿ ಪುರಸಭೆ ಅಧ್ಯಕ್ಷ ಗಾದಿಗೆ ತೆರೆಮರೆಯಲ್ಲೇ  ಆಕಾಂಕ್ಷಿಗಳ ಪೈಪೋಟಿ ನಡೆದಿದೆ. ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಮೀಸಲಿದ್ದು, ಅಧ್ಯಕ್ಷ ಗಾದಿಗೆ 18ನೇ ವಾರ್ಡ್‌ನ  ಅಖಿಲಾಬಾನು ಮೌಲಾ, ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಂ ಅವರ ಪತ್ನಿ 20ನೇ ವಾರ್ಡ್‌ನ ನಿರ್ಮಲಾ ಪಿ.ವಿ. ಸೀತಾರಾಂ, 16ನೇ ವಾರ್ಡ್‌ನ ಫಹೀಂ ಉನ್ನಿಸ  ಮುನೀರ್  ಅಹಮದ್  ಅವರು ಪ್ರಬಲವಾಗಿ ಅಧ್ಯಕ್ಷಗಾದಿಯ ಆಕಾಂಕ್ಷಿಯಾಗಿ ರೇಸ್‌ನಲ್ಲಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಗುಂಪಿಗೆ ಸೇರಿದೆ. ಆದರೆ ಉಪಾಧ್ಯಕ್ಷ ಸ್ಥಾನದ ಮೇಲೆ ಯಾರ ಕಣ್ಣು ಬಿದ್ದಿಲ್ಲ, ಎಲ್ಲರ ಚಿತ್ತ ಅಧ್ಯಕ್ಷ ಗಾದಿಯತ್ತ ಎನ್ನುವಂತಾಗಿದೆ. ಪುರಸಭೆ ಒಟ್ಟು 23 ವಾರ್ಡ್‌ಗಳಿದ್ದು, ಕಾಂಗ್ರೆಸ್ 14, ಜೆಡಿಎಸ್ 8, ಪಕ್ಷೇತರ 1 ಇದ್ದಾರೆ.
ಮೀಸಲು ವಿಷಯವಾಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ. ಈಗ ತಡೆಯಾಜ್ಞೆ ತೆರವುಗೊಂಡಿದೆ.  ಈ ಹಿಂದೆ ನಿಗದಿಪಡಿಸಲಾಗಿದ್ದ ಮೀಸಲಿನಡಿಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆಸಲು ಹೈಕೋರ್ಟ್ ಆದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement