ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಾರತೀಯ ಸಂಸ್ಕೃತಿ ಸಂಪ್ರದಾಯ ಬೆಳೆಸುವ ಶಿಕ್ಷಣ ಅಗತ್ಯ: ಸೂ.ರಂ. ರಾಮಯ್ಯ

Vishwanath S
Updated On : 12 Mar 2014, 1:30 am

ಸೂಲಿಬೆಲೆ: ಜೀವನಧಾರಕ್ಕಾಗಿ ಅಗತ್ಯವಾಗಿರುವ ಶಿಕ್ಷಣಕ್ಕಿಂತ ಭಾರತೀಯ ಸಂಸ್ಕೃತಿಯ, ಸಂಪ್ರದಾಯವನ್ನು ಉಳಿಸಿ ಬೆಳೆಸುವಂತ ಶಿಕ್ಷಣ ಇಂದಿನ ದಿನಗಳಲ್ಲಿ ಅಗತ್ಯವಾಗಿದ್ದು, ಪೋಷಕರು ಈ ನಿಟ್ಟಿನಲ್ಲಿ ಹೆಚ್ಚು ಕಾಳಜಿಯನ್ನು ವಹಿಸಬೇಕು ಎಂದ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸೂ.ರಂ. ರಾಮಯ್ಯ ಅಭಿಪ್ರಾಯಪಟ್ಟರು.
ಸೂಲಿಬೆಲೆ ಮುಖ್ಯ ನಿಲ್ದಾಣದ ಬಳಿಯ ಆಲ್‌ಮಿಸ್ಬಾ ಆಂಗ್ಲ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್.ನಾಗರಾಜ್, ಗ್ರಾಮೀಣ ಭಾಗದಲ್ಲಿರುವ ಮಕ್ಕಳು ವಿದ್ಯಾವಂತರಾಗಿ ಸಮಾಜದ ಸುಧಾರಣೆಗೆ ಕಾರಣವಾಗಬೇಕು ಎಂದರು. ಶಾಲಾ ಸಂಸ್ಥಾಪಕಿ ಅಮೀನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದಂತೆ ಜೋರಾಗಿ ಸುರಿದ ಮಳೆ ಕಾರ್ಯಕ್ರಮ ನೀಡಲು ನಾನಾ ವೇಷ, ಭೂಷಣಗಳನ್ನು ತೊಟ್ಟು ಬಂದ ವಿದ್ಯಾರ್ಥಿಗಳು ಹಾಗೂ ವೀಕ್ಷಣೆ ಮಾಡಲು ಬಂದ ಪೋಷಕರಿಗೆ ತೀವ್ರ ನಿರಾಸೆಯನ್ನುಂಟು ಮಾಡಿತು. ಕೃಷ್ಣಪ್ಪ, ಯುವರಾಜ್, ಯತಿರಾಜ್, ಜಿ.ಟಿ ಸದಾಶಿವ ಮೂರ್ತಿ, ದೇವದಾಸ್ ಸುಬ್ರಾಯ್ ಸೇಠ್, ಉಮಾ ಕುಮಾರ್, ದೊಡ್ಡ ಕುರುಬರಹಳ್ಳಿ ನಾಗರಾಜ್, ಲಕ್ಷ್ಮಣ್, ಮುನಿರಾಜ್ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement