ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಸರ್ಕಾರ ಬಯಲು ಸೀಮೆ ನೀರು ಕೊಟ್ಟರೆ ಉದ್ದಂಡ ನಮಸ್ಕಾರ

Vishwanath S
Updated On : 15 Mar 2014, 1:26 am

ಮಾಗಡಿ: ಕಾಂಗ್ರೆಸ್ ಸರ್ಕಾರ ರಾಜ್ಯದ ಬಯಲು ಸೀಮೆ ನೀರು ಕೊಟ್ಟರೆ, ಅವರಿಗೆ ನಾನು ಉದ್ದಂಡ ನಮಸ್ಕಾರ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು. ಅವರು ಮಾಗಡಿ ಪಟ್ಟಣದಲ್ಲಿ ಶುಕ್ರವಾರ ನಡೆದ ಜೆಡಿಎಸ್  ಕಾರ್ಯಕರ್ತರ  ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಾನು  ನೀರಾವರಿ ಸಮಸ್ಯೆ ಕುರಿತು ಈಗಾಗಲೇ ತಜ್ಞರಿಂದ ಮಾಹಿತಿ ಪಡೆದಿದ್ದೇನೆ. ಎಚ್.ಡಿ. ದೇವೇಗೌಡ ಪ್ರಧಾನ ಮಂತ್ರಿಯಾಗಿದ್ದಾಗಲೇ ಬಯಲು ಸೀಮೆ ನೀರು ಹರಿಸುವ ಯೋಜನೆ ಸಿದ್ಧವಾಗಿದ್ದು, ಬೆಂಗಳೂರು ಸೇರಿದಂತೆ 25 ರಾಜ್ಯಗಳಲ್ಲಿ ಮೆಟ್ರೋ ರೇಲ್ವೆ ಯೋಜನೆ ತಂದಿದ್ದು, ರೈತರ ರಸಗೊಬ್ಬರಕ್ಕೆ ಸಬ್ಸಡಿ ನೀಡಿದ್ದು ನಮ್ಮ ಯತ್ನದಿಂದಲೇ ಎಂದರು.
ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿ ನೀರಾವರಿ ಯೋಜನೆ ಜಾರಿಗೆ ತಂದರೆ 40 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗೆ ಹರಿಸಬಹುದು ಎಂದು ಮುಖ್ಯಮಂತ್ರಿ ಅರಿಯಬೇಕಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಸಭಾ ಅಭ್ಯರ್ಥಿ ಆರ್. ಪ್ರಭಾಕರ್ ರೆಡ್ಡಿ   ಪಕ್ಷದ ನಿಷ್‌ಠಾವಂತ ಕಾರ್ಯಕರ್ತ ಅವರನ್ನು ಗೆಲ್ಲಿಸಿ ಎಂದರು. ಶಾಸಕ ಎಚ್.ಸಿ. ಬಾಲಕೃಷ್ಣ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೆಡಿಎಸ್  ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಅವರನ್ನು ಆಯ್ಕೆ ಮಾಡಿ, ಅವರಿಗೆ  ಮಂತ್ರಿ ಯೋಗವಿದೆ ಭವಿಷ್ಯ ನುಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಜೆಡಿಎಸ್  ಅಭ್ಯರ್ಥಿ ಆರ್. ಪ್ರಭಾಕರ್ ರೆಡ್ಡಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement