ಅಪಘಾತ: ಯುವತಿ ಸೇರಿ ಇಬ್ಬರ ಸಾವು
ಆನೇಕಲ್ಲು: ಲಾರಿಯೊಂದು ಡಿಕ್ಕಿಯೊಡೆದ ಪರಿಣಾಮ, ಒರಿಸ್ಸಾ ಮೂಲದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಗೆ, ಹಿಂದೆ ಬರುತ್ತಿದ್ದ ಬೈಕ್ ಸವಾರರಿಗೂ ಡಿಕ್ಕಿಯೊಡೆದಾಗ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಮೇಲೆ ಲಾರಿ ಹರಿದು ಆಕೆಯೂ ಸ್ಥಳದಲ್ಲೇ ಅಸುನೀಗಿರುವ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಮುತ್ತಾನಲ್ಲೂರು ತಿರುವಿನಲ್ಲಿ ನಡೆದಿದೆ.
ಎನ್. ಲತಾ(20) ಮೇಲೆ ಲಾರಿಯ ಚಕ್ರ ಹರಿದು ಸ್ತಳದಲ್ಲೇ ಸಾವನಪ್ಪಿದ್ದಾರೆ. ಆಕೆಯ ಅಣ್ಣ ಮೋಹನ್ ಸ್ಥಳೀಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಎನ್. ಲತಾ ಹಾಗೂ ಮೋಹನ್ ಮಾರತ್‌ಹಳ್ಳಿಯ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು.
ಮತ್ತೊಂದು ಬೈಕ್ ಓಡಿಸುತ್ತಿದ್ದ ಒರಿಸ್ಸಾ ಮೂಲದ ವ್ಯಕ್ತಿ ಮುತ್ತಾನಲ್ಲೂರು ಕ್ರಾಸ್ ಬಳಿ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದು, ಮೋಹನ್ ದ್ವಿಚಕ್ರ ವಾಹನವನ್ನು ಹಿಂದಿಕ್ಕಿ ತಿರುವಿನಲ್ಲಿ ಮುನ್ನಡೆದಾಗ
ಎದುರಿನಿಂದ ಬಂದ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತ ತಪ್ಪಿಸಲು ರಸ್ತೆ ದಾಟಿ ಹೊಲಕ್ಕೆ ಬಂದ ಲಾರಿ ಮೋಹನ್ ಲತಾರ ಬೈಕ್‌ಗೂ ಡಿಕ್ಕಿಯೊಡೆಯಿತು ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರಿಂದ ರಸ್ತೆ ತಡೆ
ಮುತ್ತಾನಲ್ಲೂರು ತಿರುವಿನಲ್ಲಿ ಆಗಾಗ ಅಪಘಾತ ಸಂಭವಿಸುತ್ತಿರುತ್ತದೆ. ಚಂದಾಪುರ-ದೊಮ್ಮಸಂದ್ರ ರಸ್ತೆಯಲ್ಲಿ ದಿನ ನಿತ್ಯ ನೂರಾರು ಲಾರಿಗಳು ಹಾಗೂ ಭಾರಿ ವಾಹನಗಳು ಸಂಚರಿಸುತ್ತಿದ್ದು, ತಿರುವುಗಳಲ್ಲಿ ದಿಬ್ಬ ಹಾಕುವುದಾಗಲಿ ಅಥವಾ ಮಾಹಿತಿ ಫಲಕ ಹಾಕುವುದಾಗಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಲೋಕೋಪಯೋಗಿ ಇಲಾಖೆ ನಡೆಸಿಲ್ಲ ಎಂದು ಸ್ಥಳೀಯರು ಕೆಲಹೊತ್ತು ಎಲ್ಲ ಅಪಘಾತಗಳಿಗೂ ಸರ್ಕಾರ ಹಾಗೂ ಇಲಾಖೆಯೇ ಕಾರಣ ಹಾಗೂ ಹೊಣೆ ಎಂದು ಇಗ್ಗಲೂರು ವಾಸಿ ವೆಂಕಟಸ್ವಾಮಿ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅತ್ತಿಬೆಲೆ ವೃತ್ತ ನಿರೀಕ್ಷಕ ಕಿಶೋರ್ ಭರಣಿ ನಿರತರ ಮನವೊಲಿಸಿ ರಸ್ತೆ ತೆರವು ಮಾಡಿಸಿದರು.