ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪಾದಯಾತ್ರೆ
ಆನೇಕಲ್ಲು: ಕಾಂಗ್ರೆಸ್ ಎಲ್ಲ ವರ್ಗದ ಬಡ ಜವರ ಏಳಿಗೆಗಾಗಿ ಚಿಂತನೆ ನಡೆಸುತ್ತದೆ. ದೇಶಕ್ಕೆ ವಿದೇಶಿ ಬಂಡವಾಳ ಹರಿದು ಬರುವಲ್ಲಿ ಕಾಂಗ್ರೆಸ್ ಪಾತ್ರ ಮಹತ್ತರವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಭಾರತ ನಿರ್ಮಾಣ ಪಾದಯಾತ್ರೆ ನಂತರ ದೇವರಕೊಂಡಪ್ಪ ವೃತ್ತದಲ್ಲಿ ಅವರು ಮಾತನಾಡಿ ದರು. ಕರ್ನಾಟಕ ವನ್ನು ನೋಡಿ ಸವಾಲ್ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಬೆಂಗಳೂರನ್ನು ತಂತ್ರಜ್ಞಾನ ವಿಜ್ಞಾನ ನಗರ ಮಾಡಿದರು. ಮೇಲ್ಸೇತುವೆ, ರಿಂಗ್ರಸ್ತೆ, ಎಂಎನ್ಸಿ ಕಂಪನಿಗಳು ಬಹಳ ಹಿಂದೆಯೇ ರಾಜ್ಯವನ್ನು ಪ್ರವೇಶಿಸಿತು ಇವೆಲ್ಲಾ ಕಾಂಗ್ರೆಸ್ ಕೊಡುಗೆ ಎಂದರು. ಶಾಸಕ ಬಿ.ಶಿವಣ್ಣ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ, ಚಂದ್ರಪ್ಪ, ಗೋಪಿ, ಸೋಮಶೇಖರರೆಡ್ಡಿ, ಚೇತನ್ಶೆಟ್ಟಿ, ಕಾಂಗ್ರೆಸ್ ಜಿಪಂ ಸದಸ್ಯರು, ತಾಪಂ ಸದಸ್ಯರು ಹಾಗೂ ಪುರಸಭಾ ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.