ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೆಂ.ಗ್ರಾಮಾಂತರ ಜಿಲ್ಲೆ: 7,49,025 ಮತದಾರರು: ಡಿಸಿ ವಿ.ಶಂಕರ್ ಘೋಷಣೆ

Mainashree
Updated On : 20 Mar 2014, 12:43 pm

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2011ರ ಜನಗಣತಿಯಂತೆ 10,79,007 ಜನಸಂಖ್ಯೆ ಇದ್ದು ಅವರಲ್ಲಿ ಒಟ್ಟು 7,49,025 ಮತದಾರರಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವಿ.ಶಂಕರ್ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
   ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,89,472 (265 ಮತಗಟ್ಟೆಗಳು), ದೇವನಹಳ್ಳಿ- 1,87,508(274 ಮತಗಟ್ಟೆಗಳು), ದೊಡ್ಡಬಳ್ಳಾಪುರ- 1,86,261 (250 ಮತಗಟ್ಟೆಗಳು), ನೆಲಮಂಗಲ- 1,85,784 (243 ಮತಗಟ್ಟೆಗಳು) ಮತದಾರರಿದ್ದು ಒಟ್ಟು 7,49,025 ಮತದಾರರಿಗೆ ಜಿಲ್ಲೆಯಲ್ಲಿ 1032 ಮತಗಟ್ಟೆಗಳು ಸ್ಥಾಪನೆಗೊಳ್ಳಲಿವೆ ಎಂದರು.
 ಕೆಲವು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರು ಕಾರ್ಯ ನಿರ್ವಹಣೆ ಮಾಡಲಿದ್ದು ವೀಡಿಯೋ ಮತ್ತು ವೆಬ್ ಕ್ಯಾಮರಾ ಮುಖಾಂತರ ಮತಗಟ್ಟೆಯ ಆಗುಹೋಗುಗಳನ್ನು ಸೆರೆಹಿಡಿಯಲಾಗುವುದು ಎಂದರು.
 ಜಿಲ್ಲೆಯ 1032 ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ ಒಬ್ಬ ಪಿಆರ್ಓ, ಎಪಿಆರ್ಓಓ, ಇಬ್ಬರು ಪಿಓ ಮತ್ತು ಒಬ್ಬ ಗ್ರೂಪ್ ಡಿ.ನೌಕರ ಅಲ್ಲದೆ ಶೇ. 10ರಷ್ಟು ಮೀಸಲು ಸೇರಿ ಒಟ್ಟು 5290 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಮುರಳಿ ಮೋಹನ್ ವೀಕ್ಷಕ:  ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಹೈದರಾಬಾದಿನ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತರಾದ ಮುರಳಿ ಮೋಹನ್ ಅವರು
ಚುನಾವಣಾ ವೆಚ್ಚದ ವೀಕ್ಷಕರಾಗಿಯೂ ಮತ್ತು  ಸಾಮಾನ್ಯ ವೀಕ್ಷಕರಾಗಿ ಅಸ್ಸಾಂ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಇಂದಾಬುಲ್ಹಖ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಿ ಪರಿಣಾಮಕಾರಿಯಾಗಿ ಜಾರಿ ಮಾಡಲು 83 ಸೆಕ್ಟರ್ ಆಫೀಸರ್ಗಳು, 20 ಫ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಿದ್ದು ಅಬಕಾರಿ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಒಟ್ಟು 16 ಚೆಕ್ ಪೋಸ್ಟ್ಗಳನ್ನು ನಿಗದಿಪಡಿಸಲಾಗಿದೆ ಎಂದರು.
ಮಾದರಿ ನೀತಿ ಸಂಹಿತೆ ಅನುಷ್ಠಾನದ ವಿಚಾರವಾಗಿ ಜಿಲ್ಲಾ ಮೀನುಗಾರಿಕೆ ಇಲಾಖೆ ಕಾರ್ಯಪಾಲಕ
ಅಭಿಯಂತರರಾದ ಜಯಶೀಲರೆಡ್ಡಿ (ಮೊ.9611405349) ಹಾಗೂ ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಜಯರಾಮಯ್ಯ (ಮೊ.9686929234) ಅವರನ್ನು ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ  ಎಸ್ಪಿ ಬಿ.ರಮೇಶ್, ಗ್ರಾ. ಜಿಲ್ಲಾ ಅಡಿಷನಲ್ ಡಿಸಿ ಡಾ.ಬಿ.ವಿ. ವಾಸಂತಿ ಅಮರ್, ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಟಿ.ಆರ್. ಸುರೇಶ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಶೈಲಜಕೋಟೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement