ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಂಸ್ಕೃತಿ, ಸಂಸ್ಕಾರ ಮಕ್ಕಳಿಗೆ ತಿಳಿ ಹೇಳಿ

Mainashree
Updated On : 20 Mar 2014, 12:42 pm

ಚನ್ನಪಟ್ಟಣ: ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ತಿಳಿ ಹೇಳುವ ಅಗತ್ಯತೆ ಸಾಕಷ್ಟಿದೆ ಎಂದು   ತಾಲೂಕು ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ವಿ. ಶ್ರೀನಿವಾಸ್ ತಿಳಿಸದರು. ಇಲ್ಲಿನ ಎಲೇಕೇರಿಯಲ್ಲಿರುವ  ಮಾರುತಿ ವಿದ್ಯಾಮಂದಿರ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿ, ಈ ಬಗ್ಗೆ ಶಾಲಾ ಮಕ್ಕಳಿಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸುವ ಕಾರ್ಯ ನಡೆದಾಗ ಮಾತ್ರ ಮಕ್ಕಳನ್ನು ಸಂಸ್ಕಾರವಂತರಾಗಿಸಲು ಸಾಧ್ಯ ಎಂದರು.
ಶಾಲಾ ದಿನಗಳಲ್ಲಿ ಶಿಕ್ಷಕರು ಪಠ್ಯದ ಜತೆಗೆ ವಚನಗಳು, ವ್ಯಾಸಭಾರತ, ಜೈಮಿನಿ ಭಾರತದ ಕೆಲ ನೀತಿಯುತ ಪದ್ಯಗಳನ್ನು ತಿಳಿ ಹೇಳುವ ಮೂಲಕ ಅವರಲ್ಲಿ ಸಕಾರಾತ್ಮಕ ಮಾನವೀಯ ಮೌಲ್ಯ ಬಿತ್ತುವ ಕೆಲಸ ಮಾಡಬೇಕಿದೆ.  ಶಿಕ್ಷಕರು ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರಗಳಾಗಿಸದೆ ಅವರಲ್ಲಿ ಸೃಜನಶೀಲತೆಯನ್ನು ಬಿತ್ತುವ ಮೂಲಕ ಪರಿಪೂರ್ಣ ವ್ಯಕ್ತಿಗಳಾಗಿಸ ಬೇಕು ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಮಂಜುನಾಥ್, ಶಿಕ್ಷಕರ ಪಾತ್ರ ಸಮಾಜದಲ್ಲಿ ಬಹುಮುಖ್ಯವಾಗಿದ್ದು, ನಮ್ಮ ಸಮಾಜ ಅವರಿಗೆ ಹಿಂದಿನಿಂದಲೂ ಸಾಕಷ್ಟು ಗೌರವ ಸಲ್ಲಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ನಿಷ್ಠುರಾಗಿ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವ ಮೂಲಕ ಶಾಲೆಗೆ ಮತ್ತು ತಮ್ಮ ತಂದೆ ತಾಯಿಗಳಿಗೆ ಗೌರವ ತರಬೇಕೆಂದು ತಿಳಿಸಿದರು.  ಸಂಸ್ಥೆಯ ಅಧ್ಯಕ್ಷೆ ವೈ.ಎಸ್. ಮೀನಾ, ದಿನೇಶ್ ಶಾಸ್ತ್ರಿ, ನಂಜುಂಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement