ಎಸ್. ಪೂರ್ಣಿಮಾಗೆ ರಾಜ್ಯಮಟ್ಟದ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ
ಚನ್ನಪಟ್ಟಣ: ಪಟ್ಟಣದ ನ್ಯಾಷನಲ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ನ ಸಂಸ್ಥಾಪಕಿ ಎಸ್. ಪೂರ್ಣಿಮಾಗೆ ಕೆನರಾಬ್ಯಾಂಕ್ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ ರಾಜ್ಯಮಟ್ಟದ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ದೊರಕಿದೆ.
ಮಾ.19ರಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೆನರಾ ಬ್ಯಾಂಕ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೂರ್ಣಿಮಾಗೆ ಪ್ರಶಸ್ತಿ ನೀಡಲಾಗಿದ್ದು. ಪ್ರಶಸ್ತಿ 50 ಸಾವಿರ ರು. ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಬ್ಯಾಂಕ್ನ ಅಧ್ಯಕ್ಷ ಎಸ್.ಕೆ. ದುಬೆ, ಬಯೋಕಾನ್ ಸಂಸ್ಥೆಯ ಕಿರಮ್ ಮುಜುಂದಾರ್ ಮುಂತಾದವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ನ ಚನ್ನಪಟ್ಟಣ ಶಾಖೆ ವ್ಯವಸ್ಥಾಪಕ ನಾಗರಾಜು ಉಪಸ್ಥಿತರಿದ್ದರು.
ಶ್ರಮಕ್ಕೆ ಸಂದ ಫಲ: ತಾಲೂಕಿನ ಗಡಿಗ್ರಾಮ ಇಗ್ಗಲೂರಿನ ಸಾಮಾನ್ಯ ಕುಟುಂಬದಿಂದ ಬಂದ ಪೂರ್ಣಿಮಾ ಕಳೆದ 12ವರ್ಷದ ಹಿಂದೆ ಪಟ್ಟಣದ ಬೆಂ-ಮೈ ಹೆದ್ದಾರಿಯಲ್ಲಿ ನ್ಯಾಷನಲ್ ಕಂಪ್ಯೂಟರ್ ಸೆಂಟರ್ ಸ್ಥಾಪಿಸಿ ಗ್ರಾಮೀಣ ಹೆಣ್ಣುಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ಧಾರೆ.
ಇವರ ಬಳಿ ಕಂಪ್ಯೂಟರ್ ಶಿಕ್ಷಣ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಇಂದು ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಹುಡುಕಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿದ್ದಾರೆ.
ಇವರ ಸೇವೆ ಮತ್ತು ಉದ್ಯಮದಲ್ಲಿನ ಆರ್ಥಿಕ ಶಿಸ್ತನ್ನು ಪರಿಗಣಿಸಿದ ಕೆನರಾ ಬ್ಯಾಂಕ್ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅಭಿನಂದನೆ: ಕೆನರಾಬ್ಯಾಂಕ್ನ ರಾಜ್ಯ ಮಟ್ಟದ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಗೆ ಭಾಜನವಾಗಿರುವ ಪೂರ್ಣಿಮಾರನ್ನು ರೈತಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ, ಅಂತರ ರಾಷ್ಟ್ರೀಯ ಕ್ರೀಡಾಪಟು ಪಿ.ಜೆ. ಗೋವಿಂದರಾಜು, ಉಪನ್ಯಾಸಕ ಸುರೇಶ್ ಬಾಣಂತಹಳ್ಳಿ, ಇನ್ನೂ ಮುಂತಾದವರು ಅಭಿನಂದಿಸಿದ್ದಾರೆ.