ಡಾ. ಶ್ರೀಕಂಠನ್ ಸ್ಮರಣಾರ್ಥ ಸಂಗೀತ ಸಂಭ್ರಮ
ಬೆಂಗಳೂರು: ಪದ್ಮಭೂಷಣ ಡಾ. ಆರ್.ಕೆ. ಶ್ರೀಕಂಠನ್ ಸ್ಮರಣಾರ್ಥ ನಾದ ಗುರುಭ್ಯೋನಮಃ ಕಾರ್ಯಕ್ರಮವನ್ನು ಸಂಗೀತ ಸಂಭ್ರಮ ಕಲಾಕೇಂದ್ರ ಹಾಗೂ ಅನನ್ಯ ಸಂಸ್ಥೆ ಜಂಟಿಯಾಗಿ ಮಾ. 23ರಂದು ಆಯೋಜಿಸಿವೆ.
ಆರ್. ಕೆ. ಶ್ರೀಕಂಠನ್ ಸವಿನೆನಪಿಗಾಗಿ ಕಾರ್ಯಕ್ರಮ ಆಯೋಜಿಸಿದ್ದು ದಿನಪೂರ್ತಿ ಮನರಂಜನಾ ಕಾರ್ಯಕ್ರಮವನ್ನು ಖ್ಯಾತ ಕಲಾವಿದರು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಾವಿದೆ ವಿಮಲಾ ರಂಗಾಚಾರ್, ಕಲಾವಿದೆ ಜಯಂತಿ ಕುಮರೇಶ್, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಭಾಗವಹಿಸಲಿದ್ದಾರೆ ಎಂದು ಸಂಗೀತ ಸಂಭ್ರಮದ ನಿರ್ದೇಶಕಿ ಪಿ. ರಮಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ , ಬಿ.ಸುರೇಶ್, ಎಂ.ಎಚ್.ಕೃಷ್ಣಯ್ಯ, ಶಂಕರ ಟಿ.ವಿ ಕಾರ್ಯನಿರ್ವಹಣಾ ಅಧಿಕಾರಿ ಹರಿಕೃಷ್ಣ ಮತ್ತಿತರು ಪಾಲ್ಗೊಳ್ಳಲಿದ್ದಾರೆ.
ಗಾಯನದೊಂದಿಗೆ ಬೆಳಗ್ಗೆ 10ರಿಂದ ಆರಂಭಗೊಳ್ಳಲಿದ್ದು ಕಲಾವಿದರಿಂದ ವೀಣಾವಾದನ, ಮೃದಂಗ ಸಂಜೆವರೆಗೆ ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆಯಲಿವೆ ಎಂದರು.