ಬುದ್ಧಿಮಾಂದ್ಯರಿಗೆ ಹಿಂಸೆ: ಮಾನವಹಕ್ಕುಗಳ ಆಯೋಗದ ಸದಸ್ಯ ಚಂದ್ರಶೇಖರ್ ದಾಳಿ
ನೆಲಮಂಗಲ: ಬುದ್ಧಿಮಾಂದ್ಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ತಾಲೂಕಿನ ನಗರೂರಿನ ಮಾರುತಿ ಬುದ್ಧಿ ಮಾಂದ್ಯ ಆಸ್ಪತ್ರೆ ಹಾಗೂ ಶಾಲೆ ಮೇಲೆ ಮಾನವಹಕ್ಕು ಆಯೋಗದ ಸದಸ್ಯ ಚಂದ್ರಶೇಖರ್ ದಾಳಿ ನಡೆಸಿದ್ದಾರೆ.
ಸುಮಾರು ನೂರಕ್ಕೂ ಹೆಚ್ಚು ಬುದ್ಧಿ ಮಾಂದ್ಯರನ್ನು ಆಸ್ಪತ್ರೆಯ ಒಳಗೆ ಕೂಡಿಟ್ಟು ಚಿಕಿತ್ಸೆ ನೆಪದಲ್ಲಿ ಹಣ ವಸೂಲಿಗಾಗಿ ಹಿಂಸೆ ನೀಡುತ್ತಾರೆ. ಆಸ್ಪತ್ರೆಯ ಒಳಗೆ ಗಬ್ಬು ನಾರುತ್ತಿದೆ. ಉತ್ತಮ ಆರೋಗ್ಯದ ವಾತಾವರಣವಿಲ್ಲ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿ ರೋಗಿಗಳಿಗೆ ಉತ್ತಮ ಆರೈಕೆ ನೀಡುವಂತೆ ಎಚ್ಚರಿಕೆ ನೀಡಿದರು.