ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ'

Mainashree
Updated On : 22 Mar 2014, 12:27 pm

ಆನೇಕಲ್ಲು: 10ತಿಂಗಳಿಂದ ಯಾವುದೇ ಅಭಿವೃದ್ಧಿ ಕಾಣದೇ ಕಳಂಕಿತರನ್ನು ಸಂಪುಟದಲ್ಲಿರಿಸಿಕೊಂಡಿರುವ ಸಿದ್ದರಾಮಯ್ಯ ನವರ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಮುಖಂಡ ಈಶ್ವರಪ್ಪ ಲೇವಡಿ ಮಾಡಿದರು.
ಅವರು ಆನೇಕಲ್ ಬಿಜೆಪಿ ಕಾರ್ಯಕಕರ್ತರು ಮಾಜಿ ಮಂತ್ರಿ ಎ. ನಾರಾಯಣಸ್ವಾಮಿ ನೇತೃತ್ವದಲ್ಲಿ ಏರ್ಪಡಿಸಿದ್ದ ವಾಹನ ರ್ಯಾಲಿಯಲ್ಲಿ ಮಾತನಾಡಿ ಡಿ.ಕೆ. ಶಿವಕುಮಾರ್ ಅವರನ್ನು ಮಂತ್ರಿ ಮಾಡಬಾರದೆಂದು ಬಿಜೆಪಿ ಮಾಡಿದ ಎಲ್ಲ ಪ್ರತಿಭಟನೆ ವ್ಯರ್ಥವಾಯಿತು. ಸಿದ್ದರಾಮಯ್ಯರವರಿಗೆ ಕಳಂಕಿತರ ಅನಿವಾರ್ಯತೆ ಏನಿದೆ ಎಂಬುದನ್ನು ಜನತೆಗೆ ತಿಳಿಸಿಬೇಕು. ಶಿವಕುಮಾರ್ ಅವರ ಎಲ್ಲ ಹಗರಣಗಳಿಗೂ ಡಿ.ಕೆ. ಸುರೇಶ್ ಪಾಲುದಾರರಾಗಿದ್ದು ಮತದಾರ ಬಂಧುಗಳು ಈ ಬಗ್ಗೆ ಸ್ವಲ್ಪ ಆಲೋಚನೆ ಮಾಡಬೇಕೆಂದ ಅವರು ಹೇಳಿದರು. ಬಿಜೆಪಿಯ ಹೋರಾಟವನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳಿಸದಂತೆ ಇರುವ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಬುದ್ಧಿ ಕಲಿಸಬೇಕು. ಸ್ವಚ್ಛ ಹಾಗೂ ಯುವ ರಾಜಕಾರಣಿ ತುಳಸಿ ಮುನಿರಾಜುಗೌಡ ಅವರಿಗೆ ಮತ ನೀಡಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚನೆಗೆ ಬಿಜೆಪಿಗೇ ಮತ ನೀಡಬೇಕೆಂದು ಕೋರಿದರು.
ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ ಆನೇಕಲ್ ತಾಲೂಕು ಅಭಿವೃದ್ಧಿ ಹಾಗೂ ಪಟ್ಟಣ ಅಭಿವೃದ್ಧಿಯಲ್ಲಿ ಬಿಜೆಪಿ ಪಾತ್ರವನ್ನು ವರ್ಣಿಸಿದರು. ಬಸ್ ನಿಲ್ದಾಣ, ಶಿಂಷಾ ಯೋಜನೆಗೆ ಹಣ, ಕ್ರೀಡಾಂಗಣ ನಿರ್ಮಾಣ, ಮುನಿಸಿಪಲ್ ಕಟ್ಟಡ ನಿರ್ಮಾಣ, ತಾಲೂಕು ಪಂಚಾಯ್ತಿ ಸಭಾಂಗಣ ನಿರ್ಮಾಣ, ಉತ್ತಮ ರಸ್ತೆ ಬಿಜೆಪಿ ಸರ್ಕಾರದ ಕಿರು ಕಾಣಿಕೆ ಎಂದು ಬಣ್ಣಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ  ಮುನಿರಾಜು ಸೂಕ್ತ ಅಭ್ಯರ್ಥಿಯಾಗಿದ್ದು ಎಲ್ಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ಕೋರಬೇಕೆಂದು ಮನವಿ ಮಾಡಿದರು.
ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಮಾತನಾಡಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷನಾಗಿ ಕ್ಷೇತ್ರದ ಪರಿಚಯವಿದ್ದು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಶೀರ್ವಾದ ಮಾಡಬೇಕೆಂದು ಕೋರಿದರು. ಆನೇಕಲ್ ಪುರಸಭಾ ಸದಸ್ಯರು ಹಾಗೂ ಮುಖಂಡರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement