ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನವಜಾತ ಶಿಶು ನಾಯಿಪಾಲು

Mainashree
Updated On : 22 Mar 2014, 12:07 pm

ಚಿಕ್ಕಬಳ್ಳಾಪುರ: ಜನಿಸಿದ ಕ್ಷಣದಲ್ಲೇ ನವಜಾತ ಹೆಣ್ಣು ಶಿಶುವೊಂದನ್ನು ಬೀಡಾಡಿ ನಾಯಿಯೊಂದು ಚಿಕ್ಕಬಳ್ಳಾಪುರ ನಗರದ ಸಿವಿಲ್‌ನ್ಯಾಯಾಲಯದ ಆವರಣದಲ್ಲಿ ಕಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದ ಸಾರ್ವಜನಿಕರು ಕೂಡಲೇ ಮಗುವನ್ನು ನಾಯಿಯಿಂದ ಪಾರು ಮಾಡಿದರು. ಆದರೆ ಆ ವೇಳೆಗೆ ಮಗುವಿನ ಪ್ರಾಣ ಹಾರಿಹೋಗಿತ್ತು. ಸಿವಿಲ್‌ನ್ಯಾಯಾಲಯದ ಪಕ್ಕದಲ್ಲಿಯೇ ಸಾರ್ವಜನಿಕ ಆಸ್ಪತ್ರೆಯಿದ್ದು, ಈ ಆಸ್ಪತ್ರೆಯಿಂದಲೇ ನಾಯಿ ಮಗುವನ್ನು ಕಚ್ಚಿಕೊಂಡು ಬಂದಿರಬಹುದು. ಹೆಣ್ಣು ಮಗುವೆಂಬ ಕೀಳರಿಮೆಯಿಂದ ಹೆತ್ತವರು ಮಗುವನ್ನು ಬಿಸಾಕಿ ಹೋಗಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಈ ಸಂಬಂಧ ಮಾತನಾಡಿ, ಮಗುವಿಗೂ ಆಸ್ಪತ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು. ಮಗುವನ್ನು ಹೆತ್ತು ಅದರ ಕಡೆ ಗಮನ ಹರಿಸದಿರುವುದರಿಂದ ಮುಗ್ದ ಮಗುವೊಂದು ಬೀದಿನಾಯಿಗೆ ಬಲಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement