ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ರೀಡೆ ದೈಹಿಕ, ಮಾನಸಿಕ ಸಮತೋಲನಕ್ಕೆ ಸಹಕಾರಿ

Rashmi Kasaragodu
Updated On : 24 Mar 2014, 1:10 am

ಕನಕಪುರ: ಕನಕಪುರದ ಟೌನ್ ಟೆನ್ನಿಸ್ ಕ್ಲಬ್ ಸದಸ್ಯರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್  ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಎಂ.ಡಿ. ವಿಜಯದೇವ್ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು. ಟಿಟಿಸಿ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕೆ ಸಹಕಾರಿಯಾಗಿದ್ದು ಎಷ್ಟೇ ವೈಯಕ್ತಿಕ ಒತ್ತಡಗಳಿದ್ದರೂ ಜನರು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು, ದೈಹಿಕ ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು. ಕ್ರೀಡೆಗಳು ಜನರಲ್ಲಿ ಪರಸ್ಪರ ಸಹಕಾರ ಮನೊಭಾವವನ್ನು ಬೆಳೆಸುತ್ತವೆ ಎಂದು ವಿಜಯದೇವ್ ನುಡಿದರು.
ಕ್ರೀಡಾಕೂಟದಲ್ಲಿ ಕೆ.ಎನ್. ದಿಲೀಪ್, ಮೋಹನದಾಸ್, ಉಪಾಧ್ಯಕ್ಷ ವತ್ಸ ಚಂದ್ರು, ಖಜಾಂಚಿ ಚಂದ್ರಶೇಖರ್, ಸೋಮಶೇಖರ್, ರವಿಪಾಲ್, ವಿಕ್ರಂದೇವ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement