ಚಾಮುಂಡೇಶ್ವರಿ ಅಮ್ಮನವರ ಎರಡನೇ ವಾರ್ಷಿಕೋತ್ಸವ
ಕನಕಪುರ: ಕನಕಪುರದ ಕೆಳಗಿನಕೋಟೆ ಹೊಳೆಕಟ್ಟೆಯ ಶ್ರೀ ಚಾಮುಂಡೇಶ್ವರಿ ಅಮ್ಮನವರ ಎರಡನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಚಾಮುಂಡೇಶ್ವರಿ ಯುವಕಸಂಘದ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ಸಮಾರಂಭದ ಅಂಗವಾಗಿ ಗಣಪತಿಹೋಮ, ನವಗ್ರಹಹೋಮ, ಚಂಡಿಕಾಹೋಮ, ಪೂರ್ಣಾಹುತಿಗಳು ನಡೆದವು.
ಶ್ರೀಚಾಮುಂಡೇಶ್ವರಿ ಅಮ್ಮನವರ ಅಭಿಷೇಕದ ನಂತವ ವಿಶೇಷವಾದ ಹೂವಿನ ಅಲಂಕಾರ ಮಾಡಲಾಗಿತ್ತು.
ನೂರಾರು ಮಂದಿ ಸಾರ್ವಜನಿಕರು ಮಹಿಳೆಯರು ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಪ್ರಸ್ತುತ ಅರಳೀ ಮರದ ಬುಡದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವರಿಗೆ ಶೀಘ್ರದಲ್ಲಿಯೇ ಗುಡಿಯನ್ನು ಕಟ್ಟುವ ಅಭಿಲಾಷೆಯನ್ನು ಸಂಘದ ಸದಸ್ಯರು ವ್ಯಕ್ತಪಡಿಸಿದರು.