ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಾರತ ನಿರ್ಮಾಣಕ್ಕಾಗಿ ಪಣ ತೊಡಿ

Rashmi Kasaragodu
Updated On : 24 Mar 2014, 1:10 am

ಕ.ಪ್ರ. ವಾರ್ತೆ, ಆನೇಕಲ್ಲು, ಮಾ.23
ಭಾರತ ದೇಶವು ಆರ್ಥಿಕವಾಗಿ ಸದೃಢವಾಗಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಬಿಜೆಪಿ ಕಾರ್ಯಕರ್ತರು ವೈ ಮನಸ್ಸು, ಅಭಿಪ್ರಾಯ ಭೇದ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾಜಿ ನಗರಾಭಿವೃದ್ಧಿ ಸಚಿವ ಹಾಗೂ ಶಾಸಕ ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಅವರು ಆನೇಕಲ್ ತಾಲೂಕು ಬಿಜೆಪಿ ಘಟಕ ಚುನಾಯಿತ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಚುನಾವಣಾ ಸಂವಾದ ಕಾರ್ಯಾಗಾರದಲ್ಲಿ ಮಾತನಾಡಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಗರಣಗಳಲ್ಲಿ ಮುಳುಗಿದ್ದು ಜನ ಸಾಮಾನ್ಯರ ಬೇಸರಕ್ಕೆ ಕಾರಣವಾಗಿದೆ. ಬೆಲೆ ಏರಿಕೆ, ಗಡಿ ವಿವಾದ ಜೀವಂತಿಕೆಯಿಂದಾಗಿ ಜನರ ಬದುಕು ದುಸ್ತರವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಬದಲಾವಣೆ. ವಂಶವಾಹಿನಿ ಆಡಳಿತದ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸಬೇಕಾದ ಕರ್ತವ್ಯ ಬಿಜೆಪಿ ಪಾಲಿಗಿದ್ದು ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಲೋಕಸಭಾ ಅಭ್ಯರ್ಥಿಗಳನ್ನೇ ಗೆಲ್ಲಿಸಲು ಶ್ರಮಪಡಬೇಕೆಂದರು.
ಹೊಣೆ ಮಾಡುವುದಿಲ್ಲ: ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ ನನ್ನ ಸೋಲಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ. ಎಲ್ಲ ಕಾರ್ಯಕರ್ತರೂ ಪ್ರತಿ ಬೂತ್‌ನಲ್ಲಿ ಸಂಘಟನೆ ಮಾಡಿ ಜನರ ಸ್ವಾಭಿಮಾನವನ್ನು
ಮತಗಳಾಗಿ ಪರಿವರ್ತನೆ ಮಾಡಬೇಕೆಂದರು. ಗ್ರಾಮ ಪಂಚಾಯ್ತಿ ಸದಸ್ಯ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪುರಸಭೆ, ನಿಗಮ ಮಂಡಳಿಗಳ ಅಧಿಕಾರ ಅನುಭವಿಸಿದ ಎಲ್ಲ ಮುಖಂಡರೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ರಚನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತೆ ಎಲ್ಲ ರೀತಿಯ ಅಧಿಕಾರ ಅನುಭವಿಸಲು ಸಾಧ್ಯ ಎಂದು ಹುರಿದುಂಬಿಸಿದರು. ತಾಲೂಕು ಅಧ್ಯಕ್ಷ ಬಿ.ಜಿ. ಆಂಜಿನಪ್ಪ ಮಾತನಾಡಿ ಬೂತ್ ಮಟ್ಟದಲ್ಲಿ ಹೆಚ್ಚು ಮತಗಳಿಸಿ ಆನೇಕಲ್ ಕ್ಷೇತ್ರದಲ್ಲಿ ಬಹುಮತ ನೀಡಬೇಕೆಂದು ಕೋರಿದರು. ಹಲವಾರು ಮಂದಿ ತಾಲೂಕು ಮುಖಂಡರಿದ್ದರು.


ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಗರಣಗಳಲ್ಲಿ ಮುಳುಗಿದ್ದು ಜನ ಸಾಮಾನ್ಯರ ಬೇಸರಕ್ಕೆ ಕಾರಣವಾಗಿದೆ. ಬೆಲೆ ಏರಿಕೆ, ಗಡಿ ವಿವಾದ ಜೀವಂತಿಕೆಯಿಂದಾಗಿ ಜನರ ಬದುಕು ದುಸ್ತರವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಬದಲಾವಣೆ
ಟಿ  ಸುರೇಶ್ ಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement