ಶಿವಮೊಗ್ಗ ಕರ್ನಾಟಕ ಸಂಘದಿಂದ ಕೃತಿ ಆಹ್ವಾನ
ಬೆಂಗಳೂರು: ಶಿವಮೊಗ್ಗ ಕರ್ನಾಟಕ ಸಂಘ 2012ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ನಿರ್ಧರಿಸಿದೆ.
ಮರು ಮುದ್ರಣಗೊಂಡ ಕೃತಿಗಳಿಗೆ, ಹಸ್ತಪ್ರತಿಗಳಿಗೆ ಅವಕಾಶವಿಲ್ಲ. ಕರ್ನಾಟಕ ಸಂಘದ ಪುಸ್ತಕ ಬಹುಮಾನ ಒಂದು ಬಾರಿ ಪಡೆದವರು ಪುನಃ ಯಾವ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.ಲೇಖಕರು, ಪ್ರಕಾಶಕರು, ಆಭಿಮಾನಿಗಳು ಪುಸ್ತಕ ಕಳುಹಿಸಬಹುದಾಗಿದ್ದು, ಕರ್ನಾಟಕ ಸಂಘದ ಸದಸ್ಯರು ಭಾಗವಹಿಸುವಂತಿಲ್ಲ ಹಾಗೂ ಪ್ರಶಸ್ತಿಗೆ ಕಳುಹಿಸಿದ ಪುಸ್ತಕ ಹಿಂದಿರುಗಿಸಲಾಗುವುದಿಲ್ಲ. ಅತ್ಯುತ್ತಮ ಕೃತಿಗೆ ರು. 5ಸಾವಿರ ನಗದು, ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಕೃತಿಗಳ ತ್ರಿಪ್ರತಿಯನ್ನು ಮಾ.31ರ ಒಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ ಬಿಎಚ್ ರಸ್ತೆ, ಶಿವಮೊಗ್ಗ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.