ಸಚಿವ ರಾಮಲಿಂಗಾರೆಡ್ಡಿ ವಜಾಕ್ಕೆಸಿಎಂಗೆ ಒತ್ತಾಯ
ಬೆಂಗಳೂರು: ಬಿಎಂಟಿಸಿ ಸಂಸ್ಥೆ ಹಾಗೂ ಸಿಬ್ಬಂದಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಂಯುಕ್ತ ಉದ್ಯೋಗಿಗಳ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಮನವಿ ಮಾಡಿದೆ.
ಒಬ್ಬ ಮಹಿಳಾ ಪ್ರಯಾಣಿಕರು, ಚಾಲಕನೊಂದಿಗೆ ವಾಗ್ವಾದ ನಡೆಸಿ, ನಂತರ ಹೆದರಿ ಮಾರ್ಗ ಮಧ್ಯೆ ಬಸ್ನ ಕಿಟಕಿಯಿಂದ ಕೆಳಗೆ ಜಿಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ಮತ್ತು ಮಾನವೀಯತೆಯಿಂದ ಸಮಸ್ಯೆ ಬಗೆಹರಿಸುವ ಬದಲು ಬೇಜವಾಬ್ದಾರಿಯಿಂದ ಕೆಳಹಂತದ ಸಿಬ್ಬಂದಿ ವಜಾ ಮಾಡಲಾಗಿದೆ ಎಂದು ಸಂಘ ಆರೋಪಿಸಿದೆ