ಸ್ವಸಾಮರ್ಥ್ಯ ಬೆಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರ್ಜಗಿ ಕರೆ
ಬೆಂಗಳೂರು: ಯಾರನ್ನು ನಕಲು ಮಾಡದೆ, ಸ್ವಂತಿಕೆ ಬೆಳೆಸಿಕೊಂಡು ಸ್ವ- ಸಾಮರ್ಥ್ಯದಿಂದ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಒಳಿತು ಮಾಡಬೇಕು ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಚಿಗುರು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪಠ್ಯೇತರ ಚಟುವಟಿಕೆ ತೋರಿಸಲು ಇದೊಂದು ವೇದಿಕೆ. ವಿದ್ಯಾರ್ಥಿಗಳು ಸದಾ ವಿದ್ಯಾದಾಹದಿಂದಿದ್ದು, ಗುರಿ ತಲುಪಲು ಕಾತರರಾಗಿರಬೇಕು ಎಂದು ಟಿಸಿಎಸ್ ಸಂಸ್ಥೆಯ ಶೈಕ್ಷಣಿಕ ವಿಭಾಗದ ವ್ಯವಸ್ಥಾಪಕ ಶ್ರೀನಿವಾಸ ರಾಮಾನುಜಂ ಹೇಳಿದರು.