ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರತ್ಯೇಕ ಅಪಘಾತ: ಸವಾರ ಸಾವು

Rashmi Kasaragodu
Updated On : 25 Mar 2014, 1:39 am

ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಸವಾರನೊಬ್ಬ ಸಾವನ್ನಪ್ಪಿದ್ದು, ಮೂವರಿಗೆ ಕಾಲು ಮುರಿದ ಘಟನೆ ನಡೆದಿದೆ.
ಹೊಸಕೋಟೆಯಿಂದ ಸಂಪರ್ಕಗೊಂಡಿರುವ ಬೆಂಗಳೂರು, ಕೋಲಾರ ರಾಷ್ಟ್ರೀಯ ಹೆದ್ದಾರಿ-4ರ ತಾವರೆಕೆರೆ ಬಳಿ ಕಾರು ಮತ್ತು ಬೈಕ್ ನಡುವೆ ನಡದೆ ಅಪಘಾತದಲ್ಲಿ ಬಂಗಾರಪೇಟೆ ಮೂಲದ ರವಿ (25) ಸಾವನ್ನಪ್ಪಿದ್ದಾನೆ. ಮೊಲ್ವೋ ಕಾರ್ಖಾನೆ ಬಳಿ ರವಿ ಚಲಾಯಿಸುತ್ತಿದ್ದ ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ, ಡಿಕ್ಕಿ ರಭಸಕ್ಕೆ ರವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ನಂದಗುಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದೇ ಪೊಲೀಸ್ ಠಾಣೆ ಶಿವನಾಪುರ ಗೇಟ್ ಬಳಿ ಟಾಟಾ ಏಸ್ ಮತ್ತು ಮಾರುತಿ ಕಾರು ನಡುವೆ ಸೋಮವಾರ ಮಧ್ಯಾಹ್ನ  ಡಿಕ್ಕಿಯಾಗಿ ಮೂವರಿಗೆ ಕಾಲು ಮುರಿದಿವೆ. ಹೊಸಕೋಟೆಯಿಂದ ನಂದಗುಡಿ ಮಾರ್ಗವಾಗಿ  ಚಿಂತಾಮಣಿಗೆ ಸಂಪರ್ಕ  ಹೊಂದಿರುವ  ಹೆದ್ದಾರಿ ಶಿವನಾಪುರ ಗೇಟ್ ಬಳಿ ಕಾರು ಮತ್ತು ಟಾಟಾ ಏಸ್ ನಡುವೆ ಡಿಕ್ಕಿಯಾಗಿದೆ. ಬೆಂಗಳೂರನಿಂದ ಮದನಪಲ್ಲಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಲು (45), ಈತನ ಪತ್ನಿ ಸುಜಾತ (35) ಹಾಗೂ ಮಗಳು ಮಧು (12) ಕಾಲು ಮುರಿದಿವೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಹೊಸಕೋಟೆಯ ಎಂವಿಜೆ ಆಸ್ಪತ್ರೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಹಸ್ಮಾಟ್ ಆಸ್ಪತ್ರೆಗೆ  ದಾಖಲಿಸಲಾಗಿದೆ. ಅಪಘಾತ ನಡೆದ ನಂತರ ಟಾಟಾ ಏಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ನಂದಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement