ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಕ್ತದಾನದ ಪಠ್ಯ ವಿಷಯವಾಗಲಿ: ನೀಲಕಂಠಯ್ಯ

Rashmi Kasaragodu
Updated On : 25 Mar 2014, 1:40 am

ಕ.ಪ್ರ. ವಾರ್ತೆ  ಆನೇಕಲ್ಲು  ಮಾ.24
ಯಾವುದೇ ವ್ಯಕ್ತಿ ಮಾಡಿದ ರಕ್ತದಾನವು ಅಪಾಯದಲ್ಲಿರುವ ಮತ್ತೊಂದು ವ್ಯಕ್ತಿಯ ಜೀವವನ್ನು ಉಳಿಸುತ್ತದೆ.
ಎಂದು ಆಸರೆ ಫೌಂಡೇಷನ್‌ನ ಉಪಾಧ್ಯಕ್ಷ  ಬಿ.ಎಸ್. ನೀಲಕಂಠಯ್ಯ ತಿಳಿಸಿದರು. ಅವರು ಚಂದಾಪುರದ ಆಸರೆ ಫೌಂಡೇಷನ್, ಸೇವಾ ಭಾರತಿ, ಆರ್ಟ್ ಆಫ್ ಲಿವಿಂಗ್ ಶಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನ ಮಾಡುವ ವ್ಯಕ್ತಿಯ  ಕಷ್ಟದಲ್ಲಿರುವ ಮತ್ತೊಬ್ಬರಿಗೆ ಉಪಯುಕ್ತವಾಗಲಿ ಎಂಬ ಆಶಯ ಹೊಂದಿರುತ್ತಾರೆ. ಪಠ್ಯ ಪುಸ್ತಕಗಳಲ್ಲೂ ರಕ್ತದಾನದ ಮಹತ್ವ ಹಾಗೂ ಯಾರು, ಎಷ್ಟು ಸಲ ರಕ್ತ ನೀಡಬಹುದು, ರಕ್ತದಾನ ಮಾಡುವಲ್ಲಿ ಪಾಲಿಸಬೇಕಾದ ನಿಯಮಗಳೇನು ಎಂಬ ವಿಷಯಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ ಎಂದರು. ಅಧ್ಯಕ್ಷ ಆರ್. ಕೃಷ್ಣರಾಜು ಮಾತನಾಡಿ ಕೃತಕ ರಕ್ತ ತಯಾರು ಮಾಡಲು ಯಾವ ವಿಜ್ಞಾನಿಗಳಿಂದಲೂ ಸಾಧ್ಯವಿಲ್ಲ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement