ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿಕಾರ್ಯದರ್ಶಿ ಸಿ. ಸಿದ್ದಪ್ಪ
ಚನ್ನಪಟ್ಟಣ ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿಕಾರ್ಯದರ್ಶಿಯಾಗಿ ತಾಲೂಕಿನ ಚಕ್ಕಲೂರು ಗ್ರಾಮದವರಾದ ಸಿ. ಸಿದ್ದಪ್ಪ ಆಯ್ಕೆ ಗೊಂಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರಕಾರಾಗೃಹದ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಲ್ಲಿಸುತ್ತಿರುವ ಸಿದ್ದಪ್ಪ ಬೆಂಗಳೂರು ದಕ್ಷಿಣ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದು ಅವರ ಸೇವೆಯನ್ನು ಪರಿಗಣಿಸಿದ ಸಂಘದ ರಾಜ್ಯಾಧ್ಯಕ್ಷ ಎಲ್. ಬೈರಪ್ಪ ಕಾರ್ಯದರ್ಶಿ ನಾರಾಯಣ ಸ್ವಾಮಿ ಇವರನ್ನು ಜಂಟಿ ಕಾರ್ಯದರ್ಶಿ ಹುದ್ದೆಗೆ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.