ಸೂಕ್ತ ದಾಖಲೆ ಇಲ್ಲದ ರು. 9.50 ಲಕ್ಷ ಜಪ್ತಿ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ಗಡಿ ಭಾಗದ ಬಾಗೂರು ಚೆಕ್ ಪೋಸ್ಟ್ ಬಳಿ ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ರು.9.50 ಲಕ್ಷ ಹಣವನ್ನು ಚುನಾವಣೆ ಜಾಗೃತಿ ತಂಡದವರು ಜಪ್ತಿ ಮಾಡಿದ್ದು, ಹೆಚ್ಚಿನ
ತನಿಖೆಗಾಗಿ ಅನುಗೊಂಡಹಳ್ಳಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ನಟರಾಜ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸಕೋಟೆ ವಿಧಾನಸಭಾ ಕ್ಷೇತ್ರ ಗಡಿ ಭಾಗ ಭಾಗೂರು ಬಳಿ ವಾಹನಗಳ ತಪಾಸಣೆ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಈ ಪ್ರದೇಶದ ಚೆಕ್ ಪೋಸ್ಟ್ ಬಳಿ ಚುನಾವಣಿ ಜಾಗೃತಿ ತಂಡದವರು ವಾಹನಗಳನ್ನು
ತಪಾಸಣೆ ಮಾಡುತ್ತಿದ್ದಾಗ ಕಾರಿನಲ್ಲಿ ರು.9.50 ಲಕ್ಷ ಹಣ ಸಿಕ್ಕಿದ್ದು, ಈ ಹಣದ ಬಗ್ಗೆ ಯಾವುದೇ ದಾಖಲೆಗಳು ನೀಡಿಲ್ಲ. ಈ ಕಾರಣ ಹಣವನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಗಾಗಿ ಅನುಗೊಂಡಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದು,ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.