ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಬೇಡ್ಕರ್ ಆಶಯ ಸಂಶೋಧನೆಯಾಗಲಿ'

Rashmi Kasaragodu
Updated On : 26 Mar 2014, 1:29 am

ಆನೇಕಲ್ಲು: ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಸಮಾಜದ ಎಲ್ಲ ವರ್ಗಗಳ ಬಡ ಜನರ ಕಣ್ಮಣಿ ಯಾಗಿದ್ದರು. ಭಾರತ ಒಕ್ಕೂಟ ಭದ್ರವಾಗಿರಬೇಕಾದಲ್ಲಿ ಸಮಾನತೆ, ಮೀಸಲಾತಿ ಇರಬೇಕೆಂಬ ದೂರದೃಷ್ಟಿ ಉಳ್ಳ ಅವರ ಚಿಂತನೆ, ಬದುಕು ಹಾಗೂ ತತ್ವಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕಿದೆ ಎಂದು ಪ್ರಜ್ವಲ್ ಪ್ರಕಾಶನದ ಜಿಗಣಿ ಶಂಕರ್ ತಿಳಿಸಿದ್ದಾರೆ.ಅವರು ಬೆಂಗಳೂರು ದಕ್ಷಿಣ ಜಿಗಣಿ ಲಿಂಕ್ ರಸ್ತೆಯ ಕಾವೇರಪ್ಪ ಸಭಾಂಗಣದಲ್ಲಿ ನಡೆದ  ಚಳವಳಿಗಳ ಶಕ್ತಿ ಹಾಗೂ ಮಹತ್ವ  ವಿಚಾರ ಸಂಕಿರಣದಲ್ಲಿ ಮಾತನಾಡಿ ದೇಶಾದ್ಯಂತ ಹಲವಾರು ಪ್ರಗತಿಪರ ಸಂಘಟನೆಗಳಿವೆ. ಚಳವಳಿಗಳ ಮುಂಚೂಣಿ ನಾಯಕರು ಅಸಮಾನತೆ ದೂರಮಾಡಿ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಶಕ್ತಿ ಧಾರೆ ಎರೆಯುತ್ತಿದ್ದಾರೆ ಎಂದರು.
ಸಂಕಿರಣದಲ್ಲಿ ಸಾಹಿತಿ ಕೆ.ಎಸ್. ಭಗವಾನ್, ಡಾ. ಬಾನಂದೂರು ಕೆಂಪಯ್ಯ ಮಾತನಾಡಿದರು. ಲೇಖಕ ಪ್ರೊ. ದೇವರಾಜ್ ಬರೆದಿರುವ ಮುಂಬೈ ಮಹಾಯಾತ್ರೆ ಕೃತಿ ಬಿಡುಗಡೆ ಮಾಡಲಾಯಿತು. ಪ್ರೊ ಮಾಯೀಗೌಡ ಕೃತಿಯ ಬಗ್ಗೆ ಮಾತನಾಡಿ  ಮಹಾನ್ ವ್ಯಕ್ತಿಗಳ ಜನ್ಮಸ್ಥಳ ಹಾಗೂ ಸಮಾಧಿ ಸ್ಥಳಗಳು ಶಕ್ತಿಯ ಕೇಂದ್ರವಾಗಿರುತ್ತದೆ ಎಂದರು. ಜೈನುಗೂಡು ವೇದಿಕೆಯ ಮಹೇಶ್ ಊಗಿನಹಳ್ಳಿ ಸ್ವಾಗತ, ನಿರೂಪಣೆ ಹಾಗೂ ಕೃತಿ ಬಗ್ಗೆ ಹೇಳಿದರು.


ವಿಶ್ವ ರಂಗಭೂಮಿ ದಿನಾಚರಣೆ ನಾಳೆ

ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕಲಾವಿದರ ಸಂಘದ ನೇತೃತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಮಾ.27ರ ಬೆಳಗ್ಗೆ 10.30ಕ್ಕೆ ಕಾಶಿ ವಿಶ್ವೇಶ್ವರ ದೇವಾಲಯದ ಆವರಣದಲ್ಲಿ ನಡೆಯಲಿದೆ. ಕಲಾವಿದ ಮುನಿಬಸಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಮೂರ್ತಿ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಕಲಾವಿದ ರಂಗಸ್ವಾಮಯ್ಯ, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಕೆಂಪಣ್ಣ, ಮಧುರೆ ಹೋಬಳಿ ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement